ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಮಕ್ಕಳಲ್ಲಿ ವಿಚಿತ್ರ ಬಗ್ಗೆ ಜ್ವರ ಕಾಣಿಸಿಕೊಳ್ಳುತ್ತದೆ. ಸದ್ಯ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮರಿಯಮ್ಮನಹಳ್ಳಿ ಭಾಗಗದಲ್ಲಿ ಇದು ಕಂಡುಬಂದಿದೆ. ಇದೀಗ ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತದೆ.
BIGG NEWS: ಗಣೇಶ ನಿಮಜ್ಜನ ವೇಳೆ ಡಿಜೆ ಆಫ್ ಮಾಡಿ ಎಂದಿದ್ಕೆ ಕಲ್ಲೆಸೆತ…!; ಪಿಎಸ್ಐ ಗೆ ಗಾಯ
ಜ್ವರದ ಜತೆಗೆ ಮೈ ಮೇಲೆ ಗುಳ್ಳೆಗಳು ಕಂಡುಬರುತ್ತವೆ. ಇದು ಮಾರಣಾಂತಿಕ ಕಾಯಿಲೆ ಅಲ್ಲವಾದ್ರೂ ಪೋಷಕರು ಎಚ್ಚರಿಕೆ ವಹಿಸಬೇಕಿದೆ. ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಉಣ್ಣೆ ಜ್ವರದ ಲಕ್ಷಣಗಳು ಪತ್ತೆಯಾಗಿದೆ.
ಈ ಹಿಂದೆ ಜಿಲ್ಲೆಯ ಎರಡು-ಮೂರು ತಾಲೂಕುಗಳಲ್ಲಿ ಈ ಹಿಂದೆ ಉಣ್ಣೆ ಜ್ವರ ಕಂಡುಬಂದಿತ್ತು. ವಿಜಯಪುರ, ಬಾಗಲಕೋಟೆ ಸೇರಿದಂತೆ ನಾನಾ ಕಡೆ ಮಕ್ಕಳಲ್ಲಿ ಕಂಡುಬಂದಿತ್ತು. ಕಳೆದ ಎರಡು ವರ್ಷಗಳ ಹಿಂದೆ ಹೊಸಪೇಟೆಯ ಗ್ರಾಮೀಣ ಭಾಗದಲ್ಲಿ ಕಂಡುಬಂದಿತ್ತು.
ಈ ಜ್ವರ ಸಾಕು ಪ್ರಾಣಿಗಳು , ಮುಖ್ಯವಾಗಿ ಹಸು ಎಮ್ಮೆ ಹಾಗೂ ನಾಯಿಗಳ ಮೈಯಲ್ಲಿರುವ ಉಣ್ಣೆಹುಳಗಳ ಕಡಿತದಿಂದ ಬರುತ್ತದೆ. ಉಣ್ಣೆಯಲ್ಲಿರುವ ರಿಕೆಟ್ಸಿಯಾ ಎಂಬ ಜಂತು ಈ ಜ್ವರಕ್ಕೆ ಕಾರಣ. ಲಕ್ಷಣಗಳೆಂದರೆ ಜ್ವರ ಬಂದು ಮೈಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತೇವೆ.