ಬೆಂಗಳೂರು : ಪೋಷಕರು ತಮ್ಮ ಮಕ್ಕಳು ಖುಷಿಯಾಗಿರಲು ಏನೆಲ್ಲಾ ಮಾಡುತ್ತಾರೆ ಆದರೆ ಆ ಮಕ್ಕಳು ಅದನ್ನು ಅರ್ಥಮಾಡಿಕೊಳ್ಳದೆ ದುರುಪಯೋಗಪಡಿಸಿಕೊಂಡು ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಾರೆ. ಅದೇ ರೀತಿಯಾಗಿ ಪೋಷಕರು ತಮ್ಮ ಮಕ್ಕಳಿಗೆ ಅದರಲ್ಲೂ ಬೈಕ್ ಕೊಡಿಸುವ ವಿಷಯವಾಗಿ ಸ್ವಲ್ಪ ಗಂಭೀರವಾಗಿ ವಿಚಾರ ಮಾಡಲೇಬೇಕು. ಏಕೆಂದರೆ ಬೈಕ್ ವೀಲಿಂಗ್ ಹುಚ್ಚಾಟಕ್ಕೆ ಇದೀಗ ಓರ್ವ ಯುವಕ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಟೋಲ್ ಬಳಿ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಓರ್ವ ಯುವಕ ಬಲಿಯಾಗಿದ್ದಾನೆ. ವ್ಹೀಲಿಂಗ್ ವೇಳೆ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದೆ. ದಾಸರಹಳ್ಳಿಯ ರಾಜೀಶ್(18) ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ.
BREAKING : ದಾವಣಗೆರೆಯಲ್ಲಿ ‘ಟೈರ್’ ಸ್ಫೋಟಗೊಂಡು ಬೋಲೆರೋ ವಾಹನ ಪಲ್ಟಿ: 3 ಸಾವು 6 ಜನರಿಗೆ ಗಾಯ
ವ್ಹೀಲಿಂಗ್ ಬೈಕ್ ನಲ್ಲಿದ್ದ ಮತ್ತೊಬ್ಬ ಸೊಹೈಲ್ ಗೆ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಬೈಕ್ನ ಕೆಂಪರಾಜು, ತರುಣ್ಗೂ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್ ವೀಲಿಂಗ್ ಕುರಿತಂತೆ ಪೊಲೀಸರು ಏನೆಲ್ಲಾ ಕ್ರಮ ಕೈಗೊಂಡರು ಸಹ ಇಂತಹ ದುರ್ಘಟನೆಗಳು ನಡೆಯುತ್ತವೆ. ಅಲ್ಲದೆ ಪೋಷಕರಿಗೂ ಕೂಡ ಪೊಲೀಸರು ಕರೆಯಿಸಿ ಬುದ್ದಿವಾದ ಹೇಳಿದರು ಮತ್ತೆ ಇಂತಹ ಅಪಘಾತಗಳು ಸಂಭವಿಸುತ್ತಲೇ ಇವೆ.
ಭಾರತೀಯರು ಧಾನ್ಯಗಳಿಗೆ ಕಡಿಮೆ, ಸಾರಿಗೆಗೆ ಹೆಚ್ಚು ಖರ್ಚು ಮಾಡುತ್ತಾರೆ : ನೀತಿ ಆಯೋಗದ ವರದಿ