ಬೆಂಗಳೂರು : ಇತ್ತೀಚಿಗೆ ಯುವ ಜನತೆ ಆನ್ಲೈನ್ ಗೇಮ್ ಎಂಬ ಮಾಯಾ ಲೋಕಕ್ಕೆ ಮರುಳಾಗಿ ಮಾಡಬಾರದ ಕೆಲಸವನ್ನು ಮಾಡಿ, ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಉದಾಹರಣೆ ಎಂಬಂತೆ ಬೆಂಗಳೂರಿನಲ್ಲಿ ಆನ್ಲೈನ್ ಗೇಮಿನ ಹುಚ್ಚಾಟಕ್ಕೆ ಮನೆಯಿಂದ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಯುವಕನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.
ಹೌದು ಟಿ.ದಾಸರಹಳ್ಳಿಯಲ್ಲಿ ನಿವಾಸಿಗಳಾದ ಗೌರಮ್ಮ ಮತ್ತು ನಾಗರಾಜ್ ದಂಪತಿಗಳ ಪುತ್ರ ವರುಣ್ (18) ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದನು. ಈತನಿಗೆ ವಿಪರೀತ ಆನ್ಲೈನ್ ಗೇಮ್ ಆಡುತ್ತಿದ್ದನು. ಒಂದು ತಿಂಗಳ ಹಿಂದೆ ಆನ್ಲೈನ್ ಗೇಮ್ನಲ್ಲಿ 20 ಸಾವಿರ ಕಳೆದಿದ್ದಲ್ಲದೆ, ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು ಸಮೇತ ನಾಪತ್ತೆಯಾಗಿದ್ದಾನೆ.
ತಿಂಗಳಿಂದ ಮನೆಗೆ ಬಾರದ ಮಗನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದಾರೆ. ವರುಣ್ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ. ವರುಣ್ ಆನ್ಲೈನ್ ಗೇಮ್ನಲ್ಲಿ 20 ಸಾವಿರ ರೂ. ಕಳೆದು, ಮನೆಯಿಂದ ಪರಾರಿಯಾಗಿದ್ದಾನೆ. ಮಗನನ್ನು ಹುಡುಕಿಕೊಡುವಂತೆ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.