ಮುಂಬೈ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ನಿಧನದ ಸಾವಿನ ಸುದ್ದಿ ಮಾಸುವ ಮುನ್ನವೇ ಮನರಂಜನಾ ಕ್ಷೇತ್ರಕ್ಕೆ ಮತ್ತೊಂದು ಆಘಾತ ಎದುರಾಗಿದೆ.
‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಖ್ಯಾತಿಯ ಪರಾಗ್ ಕಾನ್ಸಾರ ಬುಧವಾರ ನಿಧನರಾಗಿದ್ದಾರೆ.
51 ವರ್ಷದ ಪರಾಗ್ ಕಾನ್ಸಾರ ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಮತ್ತು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುನಿಲ್ ಪಾಲ್ ಖಚಿತಪಡಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುನೀಲ್ ʻಹಲೋ ಸ್ನೇಹಿತರೇ, ಕಾಮಿಡಿ ಪ್ರಪಂಚದಿಂದ ಮತ್ತೊಂದು ಆಘಾತಕಾರಿ ಮತ್ತು ಕೆಟ್ಟ ಸುದ್ದಿ ಹೊರಬಿದ್ದಿದೆ. ಪರಾಗ್ ಕಂಸಾರಾ ಜೀ ನಮ್ಮ ‘ಲಾಫ್ಟರ್ ಚಾಲೆಂಜ್’ ಸಹ ಸ್ಪರ್ಧಿ ವಿಧಿವಶರಾಗಿದ್ದಾರೆ. ರಿವರ್ಸ್ ಥಿಂಕಿಂಗ್ ಕಾಮಿಡಿ ಮತ್ತು ನಮ್ಮನ್ನು ನಗಿಸುತ್ತಿದ್ದ ಪರಾಗ್ ಇನ್ನಿಲ್ಲ. ಕಳೆದ ಕೆಲವು ದಿನಗಳಿಂದ ಹಾಸ್ಯ ಲೋಕದಲ್ಲಿ ಆಗಿರುವ ದೊಡ್ಡ ನಷ್ಟಗಳ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಒಂದೊಂದಾಗಿ ಹಾಸ್ಯದ ಆಧಾರಸ್ತಂಭಗಳು ನಮ್ಮಿಂದ ದೂರ ಸರಿಯುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ರಾಜು ಶ್ರೀವಾಸ್ತವ, ದೀಪೇಶ್ ಭಾನ್, ಅಶೋಕ್ ಸುಂದ್ರಾನಿ ಮತ್ತು ಅನಂತ್ ಶ್ರೀಮಣಿ ಸೇರಿದಂತೆ ಇತ್ತೀಚೆಗೆ ತಮ್ಮ ಪ್ರಾಣ ಕಳೆದುಕೊಂಡ ಇತರ ಹಾಸ್ಯನಟರನ್ನು ಸುನಿಲ್ ನೆನಪಿಸಿಕೊಂಡರು.
BIGG NEWS : ಶೀಘ್ರವೇ ರಾಜ್ಯಾದ್ಯಂತ `ಬಸ್ ಯಾತ್ರೆ’ಗೆ ದಿನಾಂಕ ನಿಗದಿ : ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ
BIG NEWS: 2026ರ ಕಾಮನ್ ವೆಲ್ತ್ ಗೇಮ್ಸ್ ಗೆ ಶೂಟಿಂಗ್ ಸೇರ್ಪಡೆ: ಕುಸ್ತಿ, ಅರ್ಚರಿಗೆ ಕೋಕ್
ಶಿವಮೊಗ್ಗ: ಅ.8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut