ಬೆಳಗಾವಿ : ಸುವರ್ಣ ಸೌಧದ ಬಳಿಯ ಕೊಂಡಸಕೊಪ್ಪದ ಬಳಿ ಪಂಚಮಸಾಲಿ ಸಮಾವೇಶ ನಡೆಸಿ ಮಹಾ ಎಡವಟ್ಟು ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಎಸೆದ ಊಟ ತಿಂದ 10 ಕುರಿ ಸಾವನ್ನಪ್ಪಿದ್ದು, 70 ಕುರಿಗಳು ಅಸ್ವಸ್ಥಗೊಂಡಿದ್ದು, 40 ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ
BIGG NEWS: ಚಾಮರಾಜನಗರದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಸಾವು
ಕಳೆದ 3-4 ದಿನಗಳ ಹಿಂದೆ ಬಸ್ತವಾಡ ಗ್ರಾಮದ ಬಳಿ ನಡೆದಿದ್ದ ಪಂಚಮಸಾಲಿ ಸಮಾವೇಶದಲ್ಲಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರು ಉಳಿದ ಅನ್ನ, ರೊಟ್ಟಿ ಸ್ಥಳದಲ್ಲೇ ಎಸೆದು ಹೋಗಿದ್ದರು ಈ ಊಟವನ್ನು ತಿಂದ ಕುರಿಗಳು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ನಿಂಗಪ್ಪ ದೆಮಣ್ಣವರ, ಸುನೀಲ್ ದೆಮಣ್ಣವರ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಎರಡು ಕುರಿಗಳ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕೆಕೆ ಕೊಪ್ಪದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
BIGG NEWS: ಚಾಮರಾಜನಗರದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಸಾವು