ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ ಆಧಾರ್ನೊಂದಿಗೆ ಲಿಂಕ್ ಮಾಡದ ಖಾತೆ ಪಾನ್ ಕಾರ್ಡ್ ಖಾತೆಗಳನ್ನು ಅಥವಾ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯು ಖಡಕ್ ಎಚ್ಚರಿಕೆ ನೀಡಿದೆ.
ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಬಳಕೆದಾರರು ಮಾರ್ಚ್ 2023ರ ಒಳಗಾಗಿ ಪ್ಯಾನ್ ಕಾರ್ಡ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಏಪ್ರೀಲ್ 01 ರಿಂದ ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳಿದೆ.
ಮೇ 2017 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವಿನಾಯಿತಿ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ,ಮೇಘಾಲಯ ರಾಜ್ಯಗಳಲ್ಲಿ ವಾಸಿಸುವ ಜನರಿಗೆ ವಿನಾಯಿತಿ ನೀಡಲಾಗಿದೆ.
ಮಾರ್ಚ್ 30 ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಒಮ್ಮೆ ಪ್ಯಾನ್ ನಿಷ್ಕ್ರಿಯಗೊಂಡರೆ ಐಟಿ ಕಾಯ್ದೆಯಡಿಯಲ್ಲಿ ಒಬ್ಬ ವ್ಯಕ್ತಿಯು ಎಲ್ಲಾ ಪರಿಣಾಮಗಳಿಗೆ ಜವಾಬ್ದಾರನಾಗಿರುತ್ತಾನೆ ಎಂದು ಹೇಳಿದೆ.
ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ವ್ಯಕ್ತಿಯು I-T ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ, ಬಾಕಿ ಇರುವ ರಿಟರ್ನ್ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ, ಬಾಕಿಯಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ, ದೋಷಪೂರಿತ ರಿಟರ್ನ್ಗಳ ಸಂದರ್ಭದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ.
BIGG NEWS : ಹಾಸನದಲ್ಲಿ ಘನಘೋರ ದುರಂತ : ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆಗೈದು ಎಸ್ಕೇಪ್ | murder
ಪ್ಯಾನ್ ಕಾರ್ಡ್ ಎಕ್ಸ್ಪೈರಿ ಡೇಟ್ ಹೊಂದಿದೆಯೇ? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ | PAN Card