ಬೆಂಗಳೂರು : ಬೆಂಗಳೂರಿನ IISC ಕ್ಯಾಂಪಸ್ ಹೊರಗೆ ಪ್ಯಾಲೇಸ್ಥಿನ ಧ್ವಜ ಪ್ರದರ್ಶನ ಮಾಡಲಾಗಿದೆ. PUCL ಸುದ್ದಿಗೋಷ್ಠಿಯ ವೇಳೆ ಧ್ವಜ ಪ್ರದರ್ಶನ ಮಾಡಲಾಯಿತು. PUCL (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್) ಸಂಸ್ಥೆ ಸುದ್ದಿಗೋಷ್ಠಿ ನಡೆಸುತ್ತಿತ್ತು. ಈ ವೇಳೆ ಪ್ಯಾಲಿಸ್ಥಿನ್ ಧ್ವಜ ನೋಡುತ್ತಿದ್ದಂತೆ ಪೊಲೀಸರು ಸುದ್ದಿಗೋಷ್ಠಿಯನ್ನು ತಡೆದಿದ್ದಾರೆ. ಧ್ವಜವನ್ನು ವಶಕ್ಕೆ ಪಡೆದ ನಂತರ ಸುದ್ದಿಗೋಷ್ಠಿಗೆ ಅನುಮತಿ ನೀಡಿದ್ದಾರೆ.
IISC ಕ್ಯಾಂಪಸ್ ನಲ್ಲಿ ನಿನ್ನೆ ಇಸ್ರೇಲ್ ಭಾರತ ವ್ಯಾಪಾರ ಶೃಂಗಸಭೆ ನಡೆಸಿತ್ತು. ಈ ಒಂದು ಸಭೆಗೆ PUCL ವಿದ್ಯಾರ್ಥಿ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಲಾಗಿತ್ತು. IISC ಕ್ಯಾಂಪಸ್ ಒಳಗೆ ಒಂದು ಕಡೆ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದರೆ. PUCL ಸಂಸ್ಥೆಯಿಂದ ಸುದ್ದಿಗೋಷ್ಠಿ ನಡೆಸಲಾಗುತ್ತಿತ್ತು.ಸುದ್ದಿಗೋಷ್ಠಿಯ ವೇಳೆ ಭಾರತ ಪ್ಯಾಲೆಸ್ಥಿನ್ ಬಾವುಟ ಒಟ್ಟಿಗೆ ಪ್ರದರ್ಶನ ಮಾಡಲಾಯಿತು. ಈ ವೇಳೆ ಪ್ಯಾಲೇಸ್ಥಿನ ಬಾವುಟ ಹಾರಿಸಿದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಪೊಲೀಸರು ಮತ್ತು ಸರ್ಕಾರದ ವಿರುದ್ಧ PUCL ಸದಸ್ಯರು ಕಿಡಿ ಕಾರಿದ್ದಾರೆ.