ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಜೈ ಘೋಷ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸಭಾ ಕಲಾಪದಲ್ಲಿ ಬಿಜೆಪಿಯ ಮಾಜಿ ಸಚಿವ ಆರ್ಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಪಾಕಿಸ್ತಾನವನ್ನು ಪಕ್ಕದ ರಾಷ್ಟ್ರ ಎನ್ನುವ ಬದಲು ಮಿತ್ರ ರಾಷ್ಟ್ರ ಎಂದು ಕರೆಯಲಿ ಎಂದು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.
ಇಸ್ರೋ ಬಾಹ್ಯಾಕಾಶ ನೌಕೆಯಲ್ಲಿ ಚೀನಾ ಧ್ವಜ: ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಆಕ್ರೋಶ
ವಿಧಾನಸಭಾ ಕಲಾಪದಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಲ್ಪಸಂಖ್ಯಾತರು ಹೇಳಿದರೆ ವಿಧಾನಸೌಧವನ್ನು ಬರೆದುಕೊಡುತ್ತಾರೆ. ಮುಸ್ಲಿಂ ಮತಗಳ ಓಲೈಕೆಗಾಗಿ ಕಾಂಗ್ರೆಸ್ಸಿಗರು ಏನು ಬೇಕಾದರೂ ಹೇಳುತ್ತಾರೆ. ಪಾಕ್ ಶತ್ರು ರಾಷ್ಟ್ರ ಅಂದರೆ ಮುಸ್ಲಿಮರು ಕಾಂಗ್ರೆಸ್ಗೆ ಮತ ಹಾಕಲ್ಲ. ಹೀಗಾಗಿ ಪಾಕ್ ಶತ್ರು ರಾಷ್ಟ್ರವಲ್ಲ ಪಕ್ಕದ ರಾಷ್ಟ್ರ ಎಂದು ಹೇಳುತ್ತಾರೆ. ಪಕ್ಕದ ರಾಷ್ಟ್ರ ಎನ್ನುವ ಬದಲು ಮಿತ್ರ ರಾಷ್ಟ್ರ ಎಂದು ಹೇಳಲಿ ಎಂದು ಕಿಡಿ ಕಾರಿದರು.
ವಿಧಾನಸೌಧದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ
ವಿಧಾನಸೌಧದಲ್ಲಿ ಭಯೋತ್ಪಾದನಾ ಚಟುವಟಿಕೆ ಜಾಸ್ತಿ ಆಗುತ್ತಿದೆ. ಕೈ ಸರ್ಕಾರ ಬಂದ ಮೇಲೆ ಬೃಹತ್ಪಾದನಾ ಚಟುವಟಿಕೆ ಹೆಚ್ಚಾಗಿದೆ ಹೀಗಾಗಿ ಈ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಅಲ್ಲದೆ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದು ಆರ್ ಅಶೋಕ್ ಹೇಳಿದರು.
ಪ್ರಧಾನಿ ಮೋದಿಯನ್ನು ವಿಶ್ವದ ಅತ್ಯುತ್ತಮ ನಾಯಕ ಎಂದು ಕರೆದ ‘USISPF ಅಧ್ಯಕ್ಷ’