ನವದೆಹಲಿ: ಎರಡು ದಿನಗಳ ಹಿಂದೆ ಪಾಕಿಸ್ತಾನ ಗಡಿಯನ್ನು ಅಕಸ್ಮಾತ್ ಪ್ರವೇಶಿಸಿದ್ದಂತ ಭಾರತೀಯ ಯೋಧ ಪಿ.ಕೆ ಸಾಹು ಅನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದರು. ಅವರನ್ನು ಬಿಡುಗಡೆಗೆ ಪಾಕಿಸ್ತಾನ ನಕಾರ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಗಡಿ ರೇಖೆ ದಾಟಿ ಪಾಕ್ ನೊಳಗೆ ಪ್ರವೇಶವನ್ನು ಭಾರತೀಯ ಯೋಧ ಪಿ.ಕೆ ಸಾಹು ಮಾಡಿದ್ದರು. ಈ ವೇಳೆ ಪಾಕ್ ಯೋಧರು ಅವರನ್ನು ವಶಕ್ಕೆ ಪೆಡದಿದ್ದರು.
ಪಾಕ್ ಪ್ರದೇಶದ ಹೊಲದಲ್ಲಿ ಕೆಲಸ ಮಾಡ್ತಿದ್ದಂತ ರೈತರೊಂದಿಗೆ ಗೊತ್ತಿಲ್ಲದೇ ಬಿಎಸ್ಎಫ್ ಯೋಧ ಸಾಹು ಪಾಕ್ ನೊಳಗೆ ಪ್ರವೇಶಿಸಿದ್ದರು. ಅವರನ್ನು ಬಂಧಿಸಿದ್ದಂತ ಪಾಕಿಸ್ತಾನ, ಯೋಧನ ಪೋಟೋಕೂಡ ಬಿಡುಗಡೆ ಮಾಡಿತ್ತು.
ನಿನ್ನೆ ರೇಂಜರ್ ಗಳು ಬಾರದ ಕಾರಣ ನಿನ್ನೆ ಧ್ವಜ ಸಭೆ ನಡೆದಿರಲಿಲ್ಲ. ಇದೀಗ ಅವರನ್ನು ಬಿಡುಗಡೆಗೆ ಪಾಕ್ ನಿರಾಕರಿಸಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಅವರನ್ನು ಮರಳಿ ಕರೆತರುವಂತೆ ಕುಟುಂಬಸ್ಥರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.