ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕೋವಿಡ್ ಪಾಸಿಟಿ ಬಂದಿದೆ ಎಂದು ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ತಿಳಿಸಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಎರಡು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ವೈದ್ಯರ ಸಲಹೆ ಮೇರೆಗೆ ಇಂದು ಕೊರೊನಾ ಪರೀಕ್ಷೆ ಮಾಡಲಾಗಿದೆ. ಸಾರ್ವಜನಿಕರು ಮತ್ತು ಕಾರ್ಮಿಕರು ಪ್ರಧಾನಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವಂತೆ ವಿನಂತಿಸಲಾಗಿದೆ ಎಂದು ಔರಂಗಜೇಬ್ ಟ್ವೀಟ್ ಮಾಡಿದ್ದಾರೆ.
ಇದು ಮೂರನೇ ಬಾರಿ ಅವರಿಗೆ ಕೋವಿಡ್ ಪಾಸಿಟಿವ್ ಪರೀಕ್ಷೆಯಾಗಿದೆ. ಈ ಹಿಂದೆ, ಈ ವರ್ಷದ ಜನವರಿಯಲ್ಲಿ ಮತ್ತು ಜೂನ್ 2020 ರಲ್ಲಿ ಪಾಕಿಸ್ತಾನದ ಪ್ರಧಾನಿ ಕೋವಿಡ್ ಗೆ ತುತ್ತಾಗಿದ್ದರು.
Pakistan PM Shehbaz tests positive for Covid-19, reports Pakistan Media
(File photo) pic.twitter.com/U3Arnveej1
— ANI (@ANI) November 15, 2022
ಒಂದು ದಿನದ ಹಿಂದೆ, ಪಿಎಂ ಶೆಹಬಾಜ್ ಅವರು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರೊಂದಿಗಿನ ರಾಜಕೀಯ ಸಮಾಲೋಚನೆಯಿಂದ ಗುರುತಿಸಲ್ಪಟ್ಟ ಡ್ರಾ-ಔಟ್ ಭೇಟಿಯ ನಂತರ ಬ್ರಿಟನ್ನಿಂದ ಮನೆಗೆ ಮರಳಿದ್ದರು. ಭೇಟಿಯ ವೇಳೆ ಖವಾಜಾ ಆಸಿಫ್ ಸೇರಿದಂತೆ ಪಿಎಂಎಲ್-ಎನ್ ನಾಯಕರು ಅವರ ಜೊತೆಗಿದ್ದರು ಎನ್ನಲಾಗುತ್ತಿದೆ.
ಅವರು ಮೊದಲೇ ದೇಶವನ್ನು ತಲುಪಲು ನಿರ್ಧರಿಸಲಾಗಿತ್ತು. ಆದರೆ ಅವರ ಆರೋಗ್ಯ ಹದಗೆಟ್ಟ ನಂತರ ಅವರ ಯೋಜನೆಗಳು ವಿಳಂಬವಾಯಿತು. ಕುಟುಂಬ ಮೂಲಗಳು ಅವರು ಲಂಡನ್ನಲ್ಲಿ ತಮ್ಮ ವಾಸ್ತವ್ಯವನ್ನು ಎರಡು ಬಾರಿ ವಿಸ್ತರಿಸಿದರು ಎಂದು ಹೇಳಿದ್ದಾರೆ.
ಅದಕ್ಕೂ ಮೊದಲು, ಪ್ರಧಾನ ಮಂತ್ರಿ ಈಜಿಪ್ಟ್ನಲ್ಲಿ ನಡೆದ COP27 ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಜಗತ್ತಿನಾದ್ಯಂತದ ನಾಯಕರೊಂದಿಗೆ ಸಂವಾದ ನಡೆಸಿದ್ದರು. ಹವಾಮಾನ ನ್ಯಾಯಕ್ಕಾಗಿ ಪಾಕಿಸ್ತಾನದ ಪ್ರಕರಣವನ್ನು ಸಮರ್ಥಿಸಿದ್ದರು ಎಂದು ತಿಳಿದು ಬಂದಿದೆ.
ಪ್ರಧಾನ ಮಂತ್ರಿ ವೈರಸ್ ಸೋಂಕಿಗೆ ಒಳಗಾದ ಸುದ್ದಿ ಹೊರಬಿದ್ದಂತೆ ಪತ್ರಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ಹಿತೈಷಿಗಳು ಅವರು ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ ಎನ್ನಲಾಗುತ್ತಿದೆ.