ನವದೆಹಲಿ: ಆಟಗಾರರಿಗೆ ವೀಸಾ ಸಿಗದ ಕಾರಣ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡ ಟಿ20 ವಿಶ್ವಕಪ್ನಲ್ಲಿ ಸ್ಪರ್ಧಿಸಲು ಭಾರತಕ್ಕೆ ಬರುವುದಿಲ್ಲ ಎಂದು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ಮಹಾಂತೇಶ್ ಜಿಕೆ ಬುಧವಾರ ಹೇಳಿದ್ದಾರೆ.
“ಪಾಕಿಸ್ತಾನ ತಂಡ ಭಾರತಕ್ಕೆ ಬರುತ್ತಿಲ್ಲ. ಇದು ದೃಢಪಟ್ಟಿದೆ. ಯಾಕಂದ್ರೆ, ಅವರಿಗೆ ವೀಸಾ ಸಿಕ್ಕಿಲ್ಲ” ಎಂದು ಮಹಾಂತೇಶ್ ಬುಧವಾರ ಮಾಹಿತಿ ನೀಡಿದ್ದಾರೆ.
“ಭಾರತೀಯ ಹೈಕಮಿಷನ್ನಿಂದ ಪಾಸ್ಪೋರ್ಟ್ ಸಂಗ್ರಹಣೆ ಇಮೇಲ್ ಸ್ವೀಕರಿಸಿದ ನಂತರ ಪಾಕಿಸ್ತಾನ ತಂಡವು ನಿನ್ನೆ(ಡಿಸೆಂಬರ್8, 2022) ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನಿಂದ ಪಾಸ್ಪೋರ್ಟ್ಗಳನ್ನು ಸಂಗ್ರಹಿಸಿದೆ. ಆದರೆ, ಪಾಕಿಸ್ತಾನ ತಂಡಕ್ಕೆ ಯಾವುದೇ ವೀಸಾವನ್ನು ನೀಡಲಾಗಿಲ್ಲ” ಎಂದು ಪಾಕಿಸ್ತಾನ ಬ್ಲೈಂಡ್ ಕ್ರಿಕೆಟ್ ಕೌನ್ಸಿಲ್ (PBCC) ಹೇಳಿಕೆಯಲ್ಲಿ ತಿಳಿಸಿದೆ.
ಗೃಹ ವ್ಯವಹಾರಗಳ ಸಚಿವಾಲಯವು (MHA) ಪಾಕಿಸ್ತಾನದ ಅಂಧರ ತಂಡಕ್ಕೆ ಈ ಹಿಂದೆ ಅನುಮತಿ ನೀಡಿತ್ತು. ಆದರೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ (MEA) ಸಮಯಕ್ಕೆ ಸರಿಯಾಗಿ ವೀಸಾ ಕ್ಲಿಯರೆನ್ಸ್ ಬಂದಿಲ್ಲ.
“ಭಾರತದಲ್ಲಿ ನಡೆಯುತ್ತಿರುವ ಅಂಧರ ಕ್ರಿಕೆಟ್ ವಿಶ್ವಕಪ್ 2022 ರಲ್ಲಿ ಭಾಗವಹಿಸಲು 34 ಪಾಕಿಸ್ತಾನಿ ಆಟಗಾರರು ಮತ್ತು ಅಧಿಕಾರಿಗಳಿಗೆ ವೀಸಾಗಳನ್ನು ನೀಡಲು ಗೃಹ ವ್ಯವಹಾರಗಳ ಸಚಿವಾಲಯ (MHA) ಅನುಮತಿ ನೀಡಿದೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗಾಗಿ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡದ 34 ಆಟಗಾರರು ಮತ್ತು ಅಧಿಕಾರಿಗಳ ಹೆಸರನ್ನು MHA ತೆರವುಗೊಳಿಸಿದೆ. ಇದು ಪರಿಶೀಲನೆಯ ನಂತರ ತಿಳಿದುಬಂದಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.
BIGG NEWS : ಶಾಲಾ ಮಕ್ಕಳ ಅಪೌಷ್ಠಿಕತೆ, ರಕ್ತಹೀನತೆ ಪರೀಕ್ಷೆ ಮಾಡಿ : ಆರೋಗ್ಯ ಕೇಂದ್ರಗಳಿಗೆ ಸಚಿವ ಸುಧಾಕರ್ ಸೂಚನೆ