ಪಾಕಿಸ್ತಾನ: ಪಾಕಿಸ್ತಾನದ ಮುಲ್ತಾನ್ನಲ್ಲಿರುವ ಆಸ್ಪತ್ರೆಯೊಂದರಲ್ಲಿ 500ಕ್ಕೂ ಅಧಿಕ ಮಾನವ ಮೃತದೇಹಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ಘಟನೆ ಸಂಬಂಧ ಪಾಕಿಸ್ತಾನ ಸರ್ಕಾರ ತನಿಖೆ ಆರಂಭಿಸಿದೆ.
ಮುಲ್ತಾನ್ ನಿಶ್ತಾರ್ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಮೃತ ದೇಹಗಳು ತೆರೆದ ಸ್ಥಳದಲ್ಲಿ ಕೊಳೆಯುತ್ತಿರುವ ದೃಶ್ಯಗಳು ಕಂಡು ಬಂದಿವೆ. ವರದಿಗಳ ಪ್ರಕಾರ 500 ಕ್ಕೂ ಹೆಚ್ಚು , ಮೃತ ದೇಹಗಳಿವೆ ಎಂದು ತಿಳಿದು ಬಂದಿದೆ.
ಈ ಪತ್ರದಲ್ಲಿ, ಮುಲ್ತಾನ್ ನಿಶ್ತಾರ್ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಮೃತ ದೇಹಗಳು ಕೊಳೆಯುತ್ತಿರುವ ಭಯಾನಕ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸಕ್ಷಮ ಪ್ರಾಧಿಕಾರವು ಈ ಭಯಾನಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಈ ವಿಷಯದ ಬಗ್ಗೆ ವಿವರವಾದ ತನಿಖೆಯ ಬಗ್ಗೆ ನಿಷ್ಟರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಸೆಕ್ಷನ್ ಅಧಿಕಾರಿಯೊಬ್ಬರು ಪತ್ರ ಬರೆದಿದ್ದಾರೆ.
Hundreds of bodies were recovered from #Punjab #Nishtar Hospital.
Reporters say many corpses have had their chests ripped open and their human organs removed. #pakistan pic.twitter.com/HEV7jHatjR
— Salih Mohammad Salih (@salihyam) October 14, 2022
ಈ ವಿಷಯದ ಬಗ್ಗೆ ಆಳವಾದ ತನಿಖೆಯನ್ನು ಕೈಗೊಳ್ಳಲು ಮತ್ತು ಮೂರು ದಿನಗಳೊಳಗೆ ಸಕಾರಾತ್ಮಕವಾಗಿ ಈ ಕಚೇರಿಯೊಂದಿಗೆ ಹಂಚಿಕೊಳ್ಳಬಹುದಾದ ವಿಷಯದ ಕುರಿತು ವಿಚಾರಣೆಯ ವರದಿಯನ್ನು ಸಿದ್ಧಪಡಿಸಲು ನಿಮ್ಮನ್ನು ವಿನಂತಿಸಲಾಗಿದೆ. ಈ ವಿಷಯವನ್ನು ಅತ್ಯಂತ ತುರ್ತು ಎಂದು ಪರಿಗಣಿಸಬಹುದು. ಎಂದಿದ್ದಾರೆ.
ಶವಗಳ ಭಯಾನಕ ದೃಶ್ಯಗಳ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಚೌಧರಿ ಪರ್ವೈಜ್ ಇಲಾಹಿ ಅವರು ಪರಿಸ್ಥಿತಿಯನ್ನು ಗಮನಿಸಿ ತನಿಖೆಗೆ ಆದೇಶಿಸಿದ್ದಾರೆ. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮುಲ್ತಾನ್ನ ನಿಶ್ತಾರ್ ಆಸ್ಪತ್ರೆಯಲ್ಲಿ ಪತ್ತೆಯಾದ ಶವಗಳನ್ನು ಪರಿಶೀಲಿಸಲು ದಕ್ಷಿಣ ಪಂಜಾಬ್ ಆರೋಗ್ಯ ಇಲಾಖೆ ಗುರುವಾರ ಆರು ಜನರ ತಂಡವನ್ನು ರಚಿಸಿದೆ.
The case of 500 dead bodies being dumped at the rooftop of Nishtar hospital Multan shows how humanity has left this world. No one deserves such treatment, it’s a heinous act and extremely pathetic on humanitarian grounds.Terrible Terrible news. #nishtar
— Sabira Khokhar (@KhokharSabira) October 14, 2022
ಹೆಚ್ಚಿನ ದೇಹಗಳು ಎದೆಯ ಕುಳಿಗಳನ್ನು ತೆರೆದಿದ್ದು, ಅಂಗಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ದಿ ಡಾನ್ ವರದಿಯ ಪ್ರಕಾರ, ಮುಖ್ಯಮಂತ್ರಿಗಳ ಸಲಹೆಗಾರ ಚೌಧರಿ ಜಮಾನ್ ಗುಜ್ಜರ್ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ, ಶವಾಗಾರದ ಛಾವಣಿಯ ಮೇಲೆ ಹಲವು ಕೊಳೆತ ದೇಹಗಳನ್ನು ಕಂಡರು. ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿ ಶವಗಳಿಗೆ ಅಂತ್ಯಸಂಸ್ಕಾರ ಮಾಡುವಂತೆ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಆರೋಗ್ಯ ಕಾರ್ಯದರ್ಶಿ ಮುಝಾಮಿಲ್ ಬಶೀರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿವೃತ್ತ ಕ್ಯಾಪ್ಟನ್ ಸಾಕಿಬ್ ಜಾಫರ್ ಅವರು ಈ ಘಟನೆಯ ತನಿಖೆಯನ್ನು ವಹಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಆರು ಜನರ ತಂಡವನ್ನು ಕೂಡ ರಚಿಸಿದ್ದರು.
ಸಮಿತಿಯು ಬಶೀರ್ ಅವರ ನೇತೃತ್ವದಲ್ಲಿದ್ದು, ಅದರ ಸದಸ್ಯರಲ್ಲಿ ನಿಶ್ತಾರ್ ವೈದ್ಯಕೀಯ ವಿಶ್ವವಿದ್ಯಾಲಯದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಮುಹಮ್ಮದ್ ಅರ್ಫಾನ್ ಅರ್ಷದ್, ಅಂಗರಚನಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಶಫೀಕುಲ್ಲಾ ಚೌಧರಿ ಮತ್ತು ಮುಲ್ತಾನ್ನ ಡೆಪ್ಯುಟಿ ಕಮಿಷನರ್ ಮತ್ತು ಮುನ್ಸಿಪಲ್ ಪೊಲೀಸ್ ಅಧಿಕಾರಿಯಿಂದ ಒಬ್ಬ ಪ್ರತಿನಿಧಿ ಸೇರಿದ್ದಾರೆ. ಸಮಿತಿಯು ಮೂರು ದಿನಗಳಲ್ಲಿ ತನ್ನ ವರದಿಯನ್ನು ನೀಡಲಿದೆ ಎನ್ನಲಾಗುತ್ತಿದೆ.
ನಿಶ್ತಾರ್ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು, ದೇಹಗಳನ್ನು ವಿದ್ಯಾರ್ಥಿಗಳು ವೈದ್ಯಕೀಯ ಪ್ರಯೋಗಗಳಿಗೆ ಬಳಸುತ್ತಿದ್ದರು ಎಂದು ಹೇಳಿದ್ದಾರೆ.