ಕೆಎನ್ಎನ್ ಡಿಜಿಟಲ್ ಡೆಸ್ಕ್: ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯವರು ಗಡಿಗಳನ್ನು ಮೀರಿ ಅಭಿಮಾನಿಗಳನ್ನು ಹೊಂದಿದ್ದಾರೆ. 2022 ರ ಟಿ 20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ರನ್ ಗಳ ಸುರಿಮಳೆಗೈದು ಟೀಮ್ ಇಂಡಿಯಾ ಗೆಲುವು ತಂದು ಕೊಟ್ಟಿದ್ದಾರೆ. ಇದರಿಂದ ಅವರ ಮೇಲಿನ ಅಭಿಮಾನ ಗಗನಕ್ಕೇರಿದೆ.
ಚಾಮರಾಜನಗರ : ರಾಜೋತ್ಸವ ಆಹ್ವಾನ ಪತ್ರಿಕೆಯಲ್ಲಿ ಅದ್ವಾನ, ಭಯದ ನೆರಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಪಾಕ್ ವಿರುದ್ಧ ಭಾರತ ವಿಜಯ ಸಾಧಿಸಿದ್ದಕ್ಕೆ ಪಂಚದಾದ್ಯಂತದಿಂದ ಶುಭಾಶಯಗಳು ಹರಿದುಬಂದಿವೆ. ಅದೇ ರೀತಿಯಾಗಿ ಗಡಿಯಾಚೆಯ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮರಳಿನಲ್ಲಿ ಕೋಹ್ಲಿ ಭಾವಚಿತ್ರವನ್ನು ಬಿಡಿಸುವ ಮೂಲಕ ಫ್ಯಾನ್ಸ್ ಅಭಿಮಾನ ಮೆರೆದಿದ್ದಾರೆ.
This is for you @imVkohli we made from Gaddani Balochistan #virat #ViratKohli #ViratKohli𓃵 #Viratians #CricketWorldCup #rashidiartistsgaddani #viratsketch pic.twitter.com/8JKFPUmESk
— Sameer Shoukat (@mr_lovely47) October 28, 2022
ಪ್ರತಿಭಾವಂತ ಮರಳು ರೇಖಾಚಿತ್ರಕಾರರು ಬಲೂಚಿಸ್ತಾನದ ರಶೀದಿ ಕಲಾವಿದರು ಗದ್ದಾನಿ ಮರಳಿನ ಮೇಲೆ ಕೊಹ್ಲಿಯ ಬೃಹತ್ ಮ್ಯೂರಲ್ ಮಾಡಿದರು. ಇದರಲ್ಲಿ ಯುವ ಕಲಾವಿದರಿಂದ ಹಿಡಿದು ಚಿಕ್ಕ ಹುಡುಗನವರೆಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಬೃಹತ್ ರೇಖಾಚಿತ್ರವು “ಲವ್ ಫ್ರಮ್ ಆರ್ ಎ ಗಡ್ಡಾನಿ” ಎಂಬ ಸಂದೇಶದೊಂದಿಗೆ ಕೊಹ್ಲಿಯ ಪರಿಪೂರ್ಣ ಚಿತ್ರಣವನ್ನು ತೋರಿಸುತ್ತದೆ. ಕಲಾವಿದರು ಈ ಕಾರ್ಯವನ್ನು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಅದರ ರೇಖಾಚಿತ್ರದ ಛಾಯಾಚಿತ್ರಗಳು ಮತ್ತು ಅದನ್ನು ಚಿತ್ರಿಸಿದ ವಿಡಿಯೋವನ್ನು ರಚನೆಯ ಹಿಂದಿನ ಕಲಾವಿದರಲ್ಲಿ ಒಬ್ಬರಾದ ಸಮೀರ್ ಶೌಕತ್ ಅವರು ಪೋಸ್ಟ್ ಮಾಡಿದ್ದಾರೆ.