ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮುಂಬರುವ ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಬಗ್ಗೆ ಅಕಿಸ್ತಾನಿ ನಟಿ ಸೆಹರ್ ಶಿನ್ವಾರಿ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ. ಇದು ಸಾಕಷ್ಟು ಚರ್ಚೆಯಾಗುತ್ತಿದೆ.
‘ಶವ’ ಅಂತ ಕರಿಬೇಡಿ, ‘ಚಂದ್ರು’ ಎಂದು ಕರೆಯಿರಿ : ಬಿಕ್ಕಿ ಬಿಕ್ಕಿ ಅತ್ತ ಶಾಸಕ ರೇಣುಕಾಚಾರ್ಯ |M.P Renukacharya
ನವೆಂಬರ್ 6 ರಂದು ನಡೆಯುವ ಜಿಂಬಾಬ್ವಿ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಜಿಂಬಾಬ್ವೆ ತಂಡ ಮಣಿಸಿದರೆ ಆ ದೇಶದ ವ್ಯಕ್ತಿಯನ್ನು ಮದುವೆಯಾಗುವುದಾಗಿ ಪಾಕ್ ನಟಿ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹರ್ ಶಿನ್ವಾರಿ, ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದರೆ, ನಾನು ಆ ದೇಶದ ಪ್ರಜೆಯನ್ನು ಮದುವೆಯಾಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
I'll marry a Zimbabwean guy, if their team miraculously beats India in next match 🙂
— Sehar Shinwari (@SeharShinwari) November 3, 2022
ಇಟ್ಟಿದ್ದು, ಸೂಪರ್ 12ರ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿರುವ ರೋಹಿತ್ ಸೇನಾ ಆ ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಈ ನಡುವೆ ಟೀಂ ಇಂಡಿಯಾವನ್ನು ಈ ಹಿಂದೆ ಹಲವು ಬಾರಿ ಟೀಕಿಸಿದ್ದ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಮತ್ತೊಮ್ಮೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ಈ ಪಾಕಿಸ್ತಾನಿ ನಟಿ ಟೀಮ್ ಇಂಡಿಯಾವನ್ನು ವಿವಾದಾತ್ಮಕ ಪೋಸ್ಟ್ಗಳ ಮೂಲಕ ಟೀಕಿಸುವುದರೊಂದಿಗೆ ಸುದ್ದಿಯಲ್ಲಿದ್ದರು. ನಿನ್ನೆಯ ಬಾಂಗ್ಲಾದೇಶ-ಭಾರತ ಪಂದ್ಯದ ವೇಳೆ ರೋಹಿತ್ ತಂಡ ಸೋಲಬೇಕು ಎಂದು ಪದೇ ಪದೇ ಟ್ವೀಟ್ ಮಾಡಿದ್ದರು. ಈ ಹಿಂದೆ ತವರಿನಲ್ಲಿ ನಡೆದ ಟಿ20 ಸರಣಿಯ ಭಾಗವಾಗಿ ಭಾರತ ಆಸೀಸ್ ವಿರುದ್ಧ ಸೋತಾಗ ಟೀಂ ಇಂಡಿಯಾವನ್ನು ಇದೇ ರೀತಿ ಟೀಕಿಸಿದ್ದರು.