ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವಕನೊರ್ವ ಪ್ರೀತಿ ಮಾಡುವಂತೆ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
22 ವರ್ಷದ ಚೈತ್ರಾ ಆತ್ಮಹತ್ಯೆಗೆ ಶರಣಾದ ಯುವತಿ. ವಡ್ಡರಹಳ್ಳಿ ಪಾಳ್ಯದ ಯುವಕ ಕುಮಾರಸ್ವಾಮಿಯಿಂದ ಈ ಕೃತ್ಯ ನಡೆದಿದೆ.
ಕುಮಾರಸ್ವಾಮಿ ಪ್ರತಿದಿನ ಕಾಲ್, ಮೆಸೆಜ್ ಮಾಡಿ ಚೈತ್ರಾಳಿಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ. ಅಷ್ಟೇ ಅಲ್ಲದೇ ಆಕೆಯನ್ನು ಫಾಲೋ ಮಾಡುವುದು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡುವುದು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮನನೊಂದು ಚೈತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಮೃತ ಚೈತ್ರಾ ಪೋಷಕರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಳೆದ 4 ವರ್ಷಗಳಿಂದಲೂ ನನ್ನ ಲವ್ ಮಾಡು, ನಾನು ನಿನ್ನ ಮದುವೆ ಆಗುತ್ತೇನೆ ಎಂದು ಕಾಡುತ್ತಿದ್ದ. ಕೆಲಸಕ್ಕೆ ಹೋಗುವಾಗ ಬರುವಾಗ ಫಾಲೋ ಮಾಡೋದು ಮಾಡಿ ಕೊಡಬಾರದ ಕಾಟ ಕೊಡ್ತಿದ್ದನಂತೆ. ಇದರಿಂದಲೇ ತಮ್ಮ ಮಗಳು ಮನನೊಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
BREAKING NEWS: ಕಲಬುರಗಿಯಲ್ಲಿ ಗುಂಡಿನ ಸದ್ದು; ಹಳೇ ದ್ವೇಷ ಹಿನ್ನೆಲೆ ಹಾಡಹಗಲೇ ಚೆಕ್ ಪೋಸ್ಟ್ ಬಳಿ ಫೈರಿಂಗ್