ಹಾವೇರಿ: ಆಕೆ ಬಿಎಡ್ ಓದುತ್ತಿದ್ದಂತ ವಿದ್ಯಾರ್ಥಿನಿ. ಆಕೆಯನ್ನು ಪ್ರೀತ್ಸೆ ಪ್ರೀತ್ಸೆ ಅಂತ ಪಾಗಲ್ ಪ್ರೇಮಿಯೊಬ್ಬ ಹಿಂದೆ ಬಿದ್ದಿದ್ದನು. ಆದ್ರೇ ಬಿಎಡ್ ವಿದ್ಯಾರ್ಥಿನಿ ಮಾತ್ರ ಪಾಗಲ್ ಪ್ರೇಮಿಯ ಪ್ರೀತಿಯನ್ನು ಮಾತ್ರ ಒಪ್ಪಿಕೊಳ್ಳಲೇ ಇಲ್ಲ. ಇದೇ ಕಾರಣಕ್ಕೆ ಸಿಟ್ಟಾದಂತ ಆ ಪಾಗಲ್ ಪ್ರೇಮಿ ದಿಢೀರ್ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿದ್ದಾನೆ. ಮುಂದೇನಾಯ್ತು ಅಂತ ಮುಂದೆ ಓದಿ.
ಹಾವೇರಿಯ ಹಳೆಯ ಪೋಸ್ಟ್ ಆಫೀಸ್ ಬಳಿಯಲ್ಲಿ ಬಿಎಡ್ ವಿದ್ಯಾರ್ಥಿನಿಯೊಬ್ಬಳನ್ನು ಪಾಗಲ್ ಪ್ರೇಮಿಯೊಬ್ಬ ಪ್ರೀತಿಸುತ್ತಿದ್ದನು. ಅದು ಒನ್ ಸೈಡ್ ಲವ್ ಆಗಿತ್ತು. ಆಕೆಯ ಹಿಂದೆ ಬಿದ್ದಂತ ಆತ ಇಂದು ಬಿಎಡ್ ವಿದ್ಯಾರ್ಥಿನಿಯೊಬ್ಬಳು ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿದ್ದಾನೆ.
ಇಂದು ಬೆಳಿಗ್ಗೆ.9 ಗಂಟೆಗೆ ಯುವತಿ ಕಾಲೇಜಿಗೆ ತೆರಳುತ್ತಿದ್ದಂತ ವೇಳೆಯಲ್ಲಿ ಆಕೆಯನ್ನು ಹಿಂಬಾಲಿಸಿ ತೆರಳಿದಂತ ಪಾಗಲ್ ಪ್ರೇಮಿ, ಕಾರಿನಲ್ಲಿ ಆಕೆಯನ್ನು ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾನೆ. ಕೂಡಲೇ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯದ ಗಂಭೀರತೆಯನ್ನು ಅರಿತಂತ ಪೊಲೀಸರು, ಪಾಗಲ್ ಪ್ರೇಮಿಯನ್ನು ಹಿಡಿಯೋ ಮುನ್ನವೇ, ಪೊಲೀಸರು ತನ್ನ ಬಂಧಿಸಿ, ಜೈಲಿಗಟ್ಟಬಹುದು ಅಂತ ಹೆದರಿ, ಯುವತಿಯನ್ನು ಮೋಟೆ ಬೆನ್ನೂರು ಬಳಿಯೇ ಬಿಟ್ಟು ಪರಾರಿಯಾಗಿದ್ದಾನೆ. ಆ ಬಳಿಕ ಪೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಬಿಎಡ್ ಯುವತಿ ಅಪಹರಣವಾದ ಒಂದೇ ಒಂದು ಗಂಟೆಯಲ್ಲಿ ಪತ್ತೆಹಚ್ಚಿ, ಪೋಷಕರ ಬಳಿಗೆ ತಲುಪಿಸಿದ್ದಾರೆ.
ಬಿಎಡ್ ಯುವತಿಯನ್ನು ಅಪಹರಿಸಿದಂತ ಪಾಗಲ್ ಪ್ರೇಮಿಯನ್ನು ವಿಷ್ಣು ತಗಡಿನಮನಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಹಾವೇರಿ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BREAKING : ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಬಂಧನ
2019ರಲ್ಲಿ ‘ಮಂಡ್ಯ’ದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ‘ಕಾಂಗ್ರೆಸ್ ಪಕ್ಷ’ವೇ ಕಾರಣ – HDK