ಢಾಕ: ಭಾರತದಲ್ಲಿ ಶ್ರದ್ಧಾಳ ಭಯಾನಕ ಕೊಲೆಯನ್ನು ಬಹಿರಂಗವಾದ ಸ್ವಲ್ಪ ಸಮಯದ ನಂತರ ಬಾಂಗ್ಲಾದೇಶದಲ್ಲಿ ನಡೆದ ಇದೇ ರೀತಿಯ ಘಟನೆಯ ನಡೆದಿದೆ ಎನ್ನಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ನವೆಂಬರ್ 7 ರಂದು ಕವಿತಾ ರಾಣಿ ಎಂಬ ಮಹಿಳೆಯನ್ನು ಆಕೆಯ ವಿವಾಹಿತ ಪ್ರಿಯಕರ ಅಬು ಬಕರ್ ಬಾಂಗ್ಲಾದೇಶದ ಖುಲ್ನಾದಲ್ಲಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಬೂಬಕರ್ ಕವಿತಾಳ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿದನು ಎಂದು ಆರೋಪಿಸಲಾಗಿದೆ. ತಲೆಬುರುಡೆ, ಕೈಗಳು ಮತ್ತು ಇತರ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಚರಂಡಿಯ ಕೆಳಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಪೋಲಿಸರು ಘಟನ ಸ್ಥಳಕ್ಕೆ ಹೋದಾಗ ಕವಿತಾಳ ತಲೆಯನ್ನು ಪಾಲಿಥೀನ್ ನಿಂದ ಸುತ್ತಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಕೈಗಳು ಕಾಣೆಯಾಗಿದ್ದವು ಎನ್ನಲಾಗಿದೆ. ಬಾಂಗ್ಲಾದೇಶದ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ (ಆರ್ಎಬಿ) ಅಧಿಕಾರಿ, ಅಬು ಬಕರ್ ಮತ್ತು ಸಪ್ನಾ ಕಳೆದ ನಾಲ್ಕು ವರ್ಷಗಳಿಂದ ಗೋಬರ್ಚಾಕಾ ಸ್ಕ್ವೇರ್ ಪ್ರದೇಶದ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಅಂತ ಹೇಳಿದ್ದಾರೆ. ಕೊಲೆಗೆ ಕೇವಲ ಐದು ದಿನಗಳ ಮೊದಲು ಅವರು ಭೇಟಿಯಾಗಿದ್ದರು ಎನ್ನಲಾಗಿದೆ.
ಕಸ್ಟಡಿಯಲ್ಲಿ, ಅಬು ಬಕರ್ ಅಪರಾಧವನ್ನು ಒಪ್ಪಿಕೊಂಡಿದ್ದು. ನಗರದ ಗೋಬರ್ಚಾಕಾ ಪ್ರದೇಶದ ಕಿರಿದಾದ ಸ್ಥಳದಿಂದ ಕವಿತಾಳ ಕತ್ತರಿಸಿದ ಕೈಗಳನ್ನು ಪಾಲಿಥೀನ್ನಿಂದ ಸುತ್ತಿದ ಆರ್ಎಬಿ ವಶಪಡಿಸಿಕೊಂಡಿದೆ ಎನ್ನಲಾಗಿದೆ.