ಬೆಳಗಾವಿ: ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಆಕೆಯ ಮೇಲೆ ಖಾರದಪುಡಿ ಎರಡಿ, ಕೊಡಲಿಯಿಂದ ಪಾಗಲ್ ಪ್ರೇಮಿಯೊಬ್ಬ ಹಲ್ಲೆ ನಡೆಸಿದಂತ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಇದ್ದಲಹೊಂಡ ಗ್ರಾಮದ ಲಗಮಪ್ಪ ಪೂಜಾರಿ ಎಂಬಾತ ಅದೇ ಗ್ರಾಮದ ವಿವಾಹಿತ ಮಹಿಳೆ ಕಾಜಲ್ ಪೂಜಾರಿಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದನು. ಈ ಪ್ರೀತಿಯನ್ನು ಮಹಿಳೆ ನಿರಾಕರಿಸಿದ್ದರು.
ಇದೇ ಸಿಟ್ಟಿನಲ್ಲಿ ಇಂದು ಗಂಡ ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದಂತ ಪಾಗಲ್ ಪ್ರೇಮಿ ಲಗಮಪ್ಪ ಪೂಜಾರಿ, ವಿವಾಹಿತ ಮಹಿಳೆ ಕಾಜಲ್ ಪೂಜಾರಿಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. 10 ಲಕ್ಷ ರೂಪಾಯಿ ಕೊಡುತ್ತೇನೆ. ಓಡಿ ಹೋಗೋಣ ಬಾ ಅಂತ ಕರೆದಿದ್ದಾನೆ.
ಲಗಮಪ್ಪನ ಈ ಕರೆಗೆ ಕಾಜಲ್ ಒಪ್ಪಿಕೊಂಡಿಲ್ಲ. ಇದರಿಂದ ಸಿಟ್ಟಾದಂತ ಲಗಮಪ್ಪ ಆಕೆಯ ಮೇಲೆ ಖಾರದಪುಡಿ ಎರೆಚಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಜಗಳ ಕೇಳಿ ಅಕ್ಕಪಕ್ಕದ ಮನೆಯವರಾದಂತ ಮಲ್ಲೇಶ ಪೂಜಾರಿ ಹಾಗೂ ಯಲ್ಲಪ್ಪ ಕರಿಕಟ್ಟಿ ಎಂಬುವರು ಹಲ್ಲೆ ತಡೆಯೋದಕ್ಕೆ ಯತ್ನಿಸಿದ್ದಾರೆ.
ಹಲ್ಲೆ ತಡೆಯಲು ಯತ್ನಿಸಿದಂತ ಮಲ್ಲೇಶ್ ಹಾಗೂ ಯಲ್ಲಪ್ಪ ಮೇಲೆಯೂ ಕೊಡಲಿಯಿಂದ ಲಗಮಪ್ಪ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಹಲ್ಲೆಯ ಬಳಿಕ ಆರೋಪಿ ಲಗಮಪ್ಪ ಪೂಜಾರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಖಾನಾಪುರ ಠಾಣೆಯ ಪೊಲೀಸರು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
CRIME NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಗ್ರಾಮ ಪಂಚಾಯ್ತಿ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಕೊಲೆ