ಬೆಂಗಳೂರು : ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮಕ್ಕಳ ತಜ್ಞವೈದ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಬೆಂಗಳೂರು ನಾರ್ತ್ ಆಸ್ಪತ್ರೆಯಲ್ಲಿ ಅನಂತ ಪ್ರಸಾದ್ ಎನ್ನುವ ವೈದ್ಯರು ಮಕ್ಕಳ ತಜ್ಞರಾಗಿದ್ದರು ಎನ್ನಲಾಗುತ್ತಿದೆ.
ಕಳೆದ ಮೂರು ತಿಂಗಳ ಹಿಂದೆ ಮಕ್ಕಳ ತಜ್ಞ ಅನಂತ್ ಪ್ರಸಾದ್ ಅವರು ವಿವಾಹವಾಗಿದ್ದರು. ಎಂದು ಹೇಳಲಾಗುತ್ತಿದ್ದು ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗಿನಲ್ಲಿ ಹುಲಿ ದಾಳಿ : ಕಾರ್ಮಿಕ ಸಾವು
ಜಿಲ್ಲೆಯ ಪೊನ್ನಂ ಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಹುಲಿ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಸಾವನಪ್ಪಿದ್ದಾನೆ, ಕೆರೆ ಬಳಿ ದನ ಮೇಯಿಸುತ್ತಿದ್ದ ಅಸ್ಸಾಂ ಮೂಲದ ರಹಮಾನ್ (50) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.