ಬೆಂಗಳೂರು: ಸೆಪ್ಟೆಂಬರ್ 12ರಂದು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಸೆ.12ರಂದು ತನ್ನ ಜೊತೆ ಪ್ರಯಾಣ ಮಾಡುತ್ತಿದ್ದ ಮಾಲೀಕನಿಂದ 75 ಲಕ್ಷ ರೂಪಾಯಿ ಹಣ ಹಾಗೂ ಕಾರು ತೆಗೆದುಕೊಂಡು ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೋಲಿಸರು ಕೊನೆಗೂ ಬಂಧಿಸಿದ್ದಾರೆ.
ಆರೋಪಿ ವಿ ಸಂತೋಷ್ ಕುಮಾರ್ (34) ಎಂಬಾತನೊಂದಿಗೆ ಬಿಡದಿ ಬಳಿಯ ರೆಸಾರ್ಟ್ ಗೆ ಹರೀಶ್ ಹೋಗಿದ್ದರು. ಔತಣಕೂಟದಲ್ಲಿ ಭಾಗವಹಿಸಿದ ನಂತರ, ಅವರು ಹುಸ್ಕೂರು ಗೇಟ್ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಮಾರ್ಗಮಧ್ಯೆ, ಹರೀಶ್ ಸಿಗರೇಟುಗಳನ್ನು ಖರೀದಿಸಲು ಬಯಸಿದ್ದರಿಂದ ಎಸ್ಯುವಿಯನ್ನು ನಿಲ್ಲಿಸುವಂತೆ ಸಂತೋಷ್ ನನ್ನು ಕೇಳಿದನು. ಅವನು ಹಿಂದಿರುಗುವ ಹೊತ್ತಿಗೆ, ಸಂತೋಷ್ ವಾಹನದೊಂದಿಗೆ ಓಡಿ ಹೋಗಿದ್ದ ಎನ್ನಲಾಗಿದೆ. ಹಣವು ಒಳಗೆ ಇದೆ ಎಂದು ಅವನಿಗೆ ತಿಳಿದಿತ್ತು ಎನ್ನಲಲಾಗಿದೆ. ಈನಡುವೆ ಪೊಲೀಸರು ವಾಹನ ಮತ್ತು 72 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.