ಕಲಬುರಗಿ : 18ನೇ ಲೋಕಸಭೆಯ ಸಂಸದರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದ್ದು, ತೆಲಂಗಾಣದ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಪ್ರಮಾಣ ವಚನ ಸ್ವೀಕಾರದ ವೇಳೆ ಜೈ ಪ್ಯಾಲೆಸ್ತೀನ್’ ಎಂದು ಹೇಳಿ ಘೋಷಣೆ ಕೂಗಿದ್ದಾರೆ. ಈ ವಿಚಾರವಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಆಕ್ರೋಶ ಅವರ ಹಾಕಿದ್ದು ಇಂತಹವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಕಿಡಿಕಾರಿದರು.
ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓವೈಸಿ ಅಂಥವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಬೇಕು. ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ವಿಚಾರಗಳಿಗೆ ಅವಮಾನ ಮಾಡಿದ್ದಾರೆ. ಭಾರತವನ್ನು ಬಲಗೊಳಿಸಲು ಅಂಬೇಡ್ಕರ್ ಅವರು ಸಂವಿಧಾನ ತಂದಿದ್ದಾರೆ. ಪ್ಯಾಲೇಸ್ತೇನ್ ಪರ ನಿಂತುಕೊಳ್ಳಲು ಸಂವಿಧಾನ ಕೊಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ.
ಅಸಾಧುದಿನ್ ಓವೈಸಿ ಪೂರ್ವಿಕರು ರಜಾಕಾರರ ಚಳುವಳಿಯಲ್ಲಿದ್ದರೂ. ರಜಾಕಾರರ ಕಾಲದಲ್ಲಿ ಇವರೆಲ್ಲ ಜೈ ಪಾಕಿಸ್ತಾನ ಅಂತ ಕೂಗಿದವರು. ಇಸ್ಲಾಂ ರಾಷ್ಟ್ರ ನಿರ್ಮಾಣ ಆಗಬೇಕೆಂದು ಇಲ್ಲಿ ಹೋರಾಟ ಮಾಡಿದ್ದರು. ಅದೇ ಬ್ಲಡ್ ಈಗ ಪ್ಯಾಲೇಸ್ಥಿನ್ ಅಂತ ಘೋಷಣೆ ಕೂಗಿದೆ.ಹೊರಗೆ ಹೀಗಿರುವಾಗ ಮನಸ್ಸಿನಲ್ಲಿ ಇನ್ನೆಷ್ಟು ದೇಶವಿರೋಧಿ ಭಾವನೆ ಇರಬೇಕು? ಎಂದು ಕಲಬುರ್ಗಿಯಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಹೇಳಿಕೆ ನೀಡಿದರು.