ನವದೆಹಲಿ (ಭಾರತ): ಜುಲೈ 2ರಂದು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಇಂಡಿಗೋದ ಬಹುಪಾಲು ವಿಮಾನಗಳು ಲಭ್ಯತೆಯಿರಲಿಲ್ಲ. ಇದರಿಂದ ಹಲವು ನಗರಗಳಲ್ಲಿ ಭಾರಿ ವಿಳಂಬವನ್ನು ಎದುರಿಸಿದ್ದವು. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಸಿ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA-Directorate General of Civil Aviation) ವಿವರಣೆಯನ್ನು ಕೇಳಿತ್ತು. ಇದೀಗ ಇದಕ್ಕೆ ಉದ್ಯಮದ ಮೂಲಗಳು ಕಾರಣವನ್ನು ತಿಳಿಸಿವೆ.

ಶನಿವಾರ ಇಂಡಿಗೋ ಸಿಬ್ಬಂದಿ ಏರ್ ಇಂಡಿಯಾ ನಡೆಸುತ್ತಿರುವ ಉದ್ಯೋಗ ಸಂದರ್ಶನಕ್ಕೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

“ಏರ್ ಇಂಡಿಯಾದ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆಯು ಶನಿವಾರದಂದು ನಿಗದಿಯಾಗಿತ್ತು ಮತ್ತು ಇಂಡಿಗೋದ ಹೆಚ್ಚಿನ ಕ್ಯಾಬಿನ್ ಸಿಬ್ಬಂದಿಗಳು ರಜೆ ತೆಗೆದುಕೊಂಡಿದ್ದರು. ಇನ್ನು ಕೆಲವರು ಅನಾರೋಗ್ಯದ ಕಾರಣ ರಜರ ಹಾಕಿದ್ದರು. ಇದರಿಂದಾಗಿ ಇಂಡಿಗೋದ 900 ಕ್ಕೂ ಹೆಚ್ಚು ವಿಮಾನಗಳು ದೇಶಾದ್ಯಂತ ವಿಳಂಬವಾಗಿವೆ” ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಟಾಟಾ ಒಡೆತನದ ಏರ್ ಇಂಡಿಯಾ ಜೂನ್ 28 ಮತ್ತು ಜುಲೈ 1 ರಂದು ದೆಹಲಿ ಮತ್ತು ಮುಂಬೈನಲ್ಲಿ ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತ್ತು. ಬೆಂಗಳೂರಿನಲ್ಲಿ ಕ್ಯಾಬಿನ್ ಸಿಬ್ಬಂದಿಯ ವಾಕ್-ಇನ್-ಇಂಟರ್ವ್ಯೂ ಅನ್ನು ಟಾಟಾದ ಏರ್ ಇಂಡಿಯಾ ಜುಲೈ 7 ರಂದು ನಿಗದಿಪಡಿಸಿದೆ.

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರಸ್ತುತ ಪ್ರತಿದಿನ ಸುಮಾರು 1,600 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ. ಇದು ತನ್ನ ಫ್ಲೀಟ್‌ನಲ್ಲಿ ಸುಮಾರು 277 ವಿಮಾನಗಳನ್ನು ಹೊಂದಿದೆ.

ಮತ್ತೆ ಭುಗಿಲೆದ್ದ ಬೆಂಗಳೂರಿನ ಈದ್ಗಾ ಮೈದಾನ ವಿವಾದ: 12ರಂದು ಚಾಮರಾಜಪೇಟೆ ಬಂದ್ ಗೆ ಕರೆ

BREAKING NEWS: ಇಂದು 11 ಗಂಟೆಗೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿಶ್ವಾಸಮತ ಯಾಚನೆ

Share.
Exit mobile version