ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವಂತ ಈದ್ಗಾ ಮೈದಾನ ವಿವಾದ ಈಗ ಮತ್ತೆ ತಾರಕಕ್ಕೇರಿದೆ. ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ ಮತ್ತು ಮಕ್ಕಳ ಆಟಕ ಮೈದಾನವಾಗಿ ಉಳಿಯಬೇಕೆಂದು ಆಗ್ರಹಿಸಿ, ಜುಲೈ.12ರಂದು ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ.

Job Alert: ಕರ್ನಾಟಕ ಬೀಜ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಸಂಬಂಧ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವತಿಯಿಂದ ನಿನ್ನೆ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ 25ಕ್ಕೂ ಹೆಚ್ಚು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಹಲವು ಸಂಘಟನೆಯ ಸಭೆಯಲ್ಲಿ ಚಾಮರಾಜಪೇಟೆ ಆಟದ ಮೈದಾನ ಸಾರ್ವಜನಿಕರ ಮೈದಾನವಾಗಿ ಮತ್ತು ಮಕ್ಕಳ ಆಟಕ್ಕೆ ಬಳಕೆ ಆಗುವಂತೆ ಉಳಿಯಬೇಕು. ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜುಲೈ.12ರಂದು ಬಂದ್ ಮಾಡಿ, Rally ನಡೆಸೋದಕ್ಕೆ ನಿರ್ಧರಿಸಿದ್ದಾರೆ.

BREAKING NEWS: ಇಂದು 11 ಗಂಟೆಗೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿಶ್ವಾಸಮತ ಯಾಚನೆ

ಜುಲೈ.12ರಂದು ಬೆಳಿಗ್ಗೆ 10 ಗಂಟೆಯಿಂದ ಸಿರ್ಸಿ ವೃತ್ತದಿಂದ ಈದ್ಗಾ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಸಲಾಗುತ್ತದೆ. ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಗೆ ತೆರಳಿ, ಮೈದಾನವನ್ನು ಯಾರೊಬ್ಬರಿಗೂ ದಾಖಲೆ ಮಾಡಿಕೊಡದಂತೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ.

Share.
Exit mobile version