ಬೆಂಗಳೂರು: ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯ ಬೀಜ ನಿಗಮ ನಿಯಮಿತದ ಬೆಂಗಳೂರು ಇಲ್ಲಿ ಲಭ್ಯವಿರುವಂತ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಈ ಕೆಳಕಂಡ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.

ನೀವು ‘ಹೊಸ BPL, APL ಪಡಿತರ ಚೀಟಿ’ಗಾಗಿ ಅರ್ಜಿ ಸಲ್ಲಿಸಬೇಕಾ.? ಹಾಗಿದ್ದರೇ ಈ ವಿಧಾನ ಅನುಸರಿಸಿ.! New Ration Card

ಹುದ್ದೆಗಳ ವಿವರ

  • ಸಹಾಯಕ ವ್ಯವಸ್ಥಾಪಕರು ( ಕಾರ್ಯಾಚರಣೆ ) -16 ಹುದ್ದೆಗಳು
  • ಹಿರಿಯ ಸಹಾಯಕರು – 01 ಹುದ್ದೆ
  • ಕಿರಿಯ ಸಹಾಯಕರು – 09 ಹುದ್ದೆ
  • ಬೀಜ ಸಹಾಯಕರು – 06 ಹುದ್ದೆ

ಈ ಮೇಲ್ಕಂಡ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆನ್ ಲೈನ್ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಸಲ್ಲಿಕೆ ವಿಧಾನ

ಅರ್ಹ ಅಭ್ಯರ್ಥಿಗಳು http://kea.kar.nic.in ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯು ದಿನಾಂಕ 04-07-2022ರ ಇಂದಿನಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ದಿನಾಂಕ 03-08-2022 ಕೊನೆಯಾಗಿದೆ. ಇ-ಪೋಸ್ಟ್ ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 05-08-2022 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.

Share.
Exit mobile version