ನವದೆಹಲಿ: ಭಾನುವಾರ ನಡೆದ ಲಿಟ್ಮಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಹುಲ್ ನಾರ್ವೇಕರ್ ಅವರನ್ನು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಿದ ನಂತರ, ನಾಲ್ಕು ದಿನಗಳ ಹಿಂದಿನ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಇಂದು ವಿಶ್ವಾಸಮತವನ್ನು ಎದುರಿಸುತ್ತಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಆಡಳಿತವನ್ನು ಉರುಳಿಸಿ ಶಿವಸೇನೆಯ ಬಂಡಾಯ ಶಾಸಕ ಶಿಂಧೆ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವು ರಾಜ್ಯದಲ್ಲಿ ಹೈ ವೋಲ್ಟೇಜ್ ರಾಜಕೀಯ ನಾಟಕದ ರಂಗು ಬಂದಿದೆ.

Gold prices today: ಚಿನ್ನದ ಬೆಲೆ ಇಂದು 2 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ

ವಿಶ್ವಾಸಮತ ಯಾಚನೆಗೂ ಮುನ್ನ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಅವರ ಬಣದ ಶಿವಸೇನೆ ಶಾಸಕರ ಗುಂಪು ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಪಕ್ಷದ ಇತರ ಶಾಸಕರೊಂದಿಗೆ ಇಂದಿನ ವಿಶ್ವಾಸಮತ ಯಾಚನೆಯ ಕಾರ್ಯತಂತ್ರವನ್ನು ನಿರ್ಧರಿಸಲು ಸಭೆ ನಡೆಸಿದರು.

Job Alert: ಕರ್ನಾಟಕ ಬೀಜ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರವು ವಿಧಾನಮಂಡಲದ ವಿಶೇಷ ಅಧಿವೇಶನದ ಎರಡನೇ ದಿನವಾದ ಸೋಮವಾರ ಬಹುಮತ ಪರೀಕ್ಷೆಯನ್ನು ಎದುರಿಸಲಿದೆ. ಇಂದು ಎಲ್ಲಾ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಕಾರ್ಯತಂತ್ರವೇನು ಎಂಬುದರ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

BREAKING NEWS: ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಕಮರಿಗೆ ಉರುಳಿ ಬಿದ್ದ ಬಸ್: ಶಾಲಾ ಮಕ್ಕಳು ಸೇರಿ 16 ಜನರು ಸಾವು

ಇಂದು 11 ಗಂಟೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸಿಎಂ ಏಕನಾಥ ಶಿಂಧೆ ಸಾಭೀತುಪಡಿಸಲಿದ್ದಾರೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಗೆದ್ದು ಕೂಡ ಬರಲಿದ್ದಾರೆ ಎನ್ನಲಾಗಿದೆ.

Share.
Exit mobile version