ಮೆಕ್ಸಿಕೋ : ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಚಿಯಾಪಾಸ್ನಲ್ಲಿ, ಗ್ರಾಮೀಣ ಮಾಧ್ಯಮಿಕ ಶಾಲೆಯಲ್ಲಿ ವಿಷಪೂರಿತ ಆಹಾರವನ್ನು ಸೇವಿಸಿ 57 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಕೆಲವರು ಸ್ಥಿತಿ ಗಂಭಿರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕಲುಷಿತ ಆಹಾರ ಅಥವಾ ನೀರು ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಶಂಕಿಸಿದ್ದಾರೆ. ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಮಕ್ಕಳು ಶಾಲೆಯಲ್ಲಿ ನೀರು ಅಥವಾ ಆಹಾರದಲ್ಲಿ ವಿಷ ಸೇವಿಸಿದ್ದಾರೆ ಎಂದು ಪೋಷಕರು ಶಂಕಿಸಿದ್ದು, ಶಾಲೆಯ ಅಧಿಕಾರಿಗಳ ವಿರುದ್ಧ ಾಕ್ರೋಶ ವ್ಯಕ್ತಪಡಿಸಿದ್ದಾರೆ.
ಬೋಚಿಲ್ನ ಗ್ರಾಮೀಣ ಸಮುದಾಯದ 57 ವಿದ್ಯಾರ್ಥಿಗಳು ವಿಷದ ಲಕ್ಷಣಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಬಂದಿದ್ದಾರೆ. ಅದರಲ್ಲಿ ರೀವ್ರವಾಗಿ ಅಸ್ವಸ್ಥಗೊಂಡ ಒಬ್ಬ ವಿದ್ಯಾರ್ಥಿಯನ್ನು ರಾಜ್ಯದ ರಾಜಧಾನಿಯ ಆಸ್ಪತ್ರೆಗೆ ವರ್ಗಾಹಿಸಲಾಗಿದೆ. ಉಳಿದವರು ಸ್ಥಿರವಾಗಿದ್ದಾರೆ ಎಂದು ಮೆಕ್ಸಿಕನ್ ಸಾಮಾಜಿಕ ಭದ್ರತಾ ಸಂಸ್ಥೆ ತಿಳಿಸಿದೆ.
ಬೋಚಿಲ್ನ ನಾಯಕರು ಘಟನೆಯಿಂದ ಆಕ್ರೋಶಗೊಂಡಿದ್ದು, ಅವರು ರಾಜ್ಯ ಪ್ರಾಸಿಕ್ಯೂಟರ್ ತನಿಖೆಯೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಶನಿವಾರ 15 ಟಾಕ್ಸಿಕಾಲಜಿ ಪರೀಕ್ಷೆಗಳನ್ನು ನಡೆಸಿದ್ದು, ಎಲ್ಲವೂ ನಿಷೇಧಿತ ಮಾದಕವಸ್ತುಗಳ ಬಗ್ಗೆ ನಕಾರಾತ್ಮಕವಾಗಿ ಬಂದಿವೆ ಎಂದು ಹೇಳಿದರು.