ರಾಯಚೂರು: ಬೆಂಗಳೂರು ಚಿಲುಮೆ ಸಂಸ್ಥೆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
BIGG NEWS: ಕಾಂಗ್ರೆಸ್ ಬಾಗಿಲು ತಟ್ಟಿದ ಬಿಜೆಪಿ ಹಾಲಿ MLC; ರಾಜಾಜಿನಗರ ಕ್ಷೇತ್ರದ ಟಿಕೆಟ್ಗೆ ಬೇಡಿಕೆ
ರಾಯಚೂರಿನಲ್ಲಿ 40 ಸಾವಿರಕ್ಕೂ ಹೆಚ್ಚು ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ ಶಾಸಕರಿಂದ ಗೋಲ್ಮಾಲ್ ನಡೆದಿದೆ ಅಂತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ದಾಖಲೆ ಹಿಡಿದು ಆರೋಪಿಸಿದ್ದಾರೆ.
2020 ರಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ 2,36,710 ಮತದಾರರಿದ್ದರೆ, 2022 ರಲ್ಲಿ 2,38,000 ಮತದಾರರು ಇದ್ದಾರೆ. ಆದರೆ 2023ರ ಚುನಾವಣೆಗಾಗಿ (Elections) ಬಿಡುಗಡೆಯಾಗಿರುವ ಪರಿಷ್ಕೃತ ಮತದಾರರ ಕರಡು ಪ್ರತಿಯಲ್ಲಿ 2,13,000 ಮತದಾರರಿದ್ದಾರೆ. 16 ಸಾವಿರ ಹೊಸ ಮತದಾರನ್ನ ಸೇರ್ಪಡೆ ಮಾಡಲಾಗಿದೆ. ಆದ್ರೆ ಮೊದಲಿನಿಂದ ಇದ್ದ 40 ಸಾವಿರ ಮತದಾರರ ಹೆಸರನ್ನ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.