ಶಿವಮೊಗ್ಗ : ಲೋಕಸಭಾ ಚುನಾವನೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಲ್ಬುರ್ಗಿಯಿಂದ ಮತ ಬೇಟೆಯನ್ನು ಆರಂಭಿಸಿದ್ದಾರೆ ಈ ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಆಯೋಜನೆಗೊಂಡಿರುವ ಬಿಜೆಪಿ ವಿಕಸಿತ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಈ ಬಾರಿ 400 ಮೇಲೆ ಎಂದು ಕನ್ನಡದಲ್ಲಿ ಲೋಕಸಮರಕ್ಕೆ ಘೋಷಣೆ ಮೊಳಗಿಸಿದರು.
ಮೋದಿ ಸರ್ಕಾರ ಕೇವಲ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ : ಸಂಕಲ್ಪ ಸಮಾವೇಶದಲ್ಲಿ BSY ಹೇಳಿಕೆ
ಶಿವಮೊಗ್ಗದ ಫ್ರೀಡಂ ಪಾರ್ಕಿನ ಅಲ್ಲಮಪ್ರಭು ಮೈದಾನದಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ಮೈದಾನ ತುಂಬಿ ತಳುಕುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿಕೊಂಡವರು ಇಂದು ಒಂದಾಗಿದ್ದಾರೆ ಎಂದು ಇಂಡಿಯಾ ಮೈತ್ರಿಕೂಡದಿರುದ್ದ ಮೋದಿ ವಾಗ್ದಾಳಿ ನಡೆಸಿದರು.
4 ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
ಜೂನ್ ನಾಲ್ಕರಂದು NDA ಮೈತ್ರಿಕೂಟ 400 ಗಡಿ ದಾಟಲಿದೆ. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕಕ್ಕಾಗಿ ಹಾಗೂ ಬ್ರಷ್ಟಾಚಾರಿಗಳ ವಿರುದ್ಧ ಹೋರಾಡಲು ೪೦೦ ಕು ಅಧಿಕ ಸ್ಥಾನವನ್ನು ಗೆಲ್ಲಬೇಕು ಬಡವರ ಕಲ್ಯಾಣ ಇರುವೆಗಾಗಿ ಬಿಜೆಪಿ ಶ್ರಮಿಸುತ್ತಿದೆ ಕಾಂಗ್ರೆಸ್ನವರು ಇಡೀ ದಿನ ಸುಳ್ಳು ಹೇಳುವುದರಲ್ಲಿ ಮುಳುಗಿದ್ದಾರೆ. ತಮ್ಮ ಸುಳ್ಳು ಮರೆಮಾಚಲು ಕಾಂಗ್ರೆಸ್ ಮತ್ತೆ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು :ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ‘ತಜ್ಞರ ಸಮಿತಿ ರಚನೆಗೆ’ ಸಿಎಂ ಸಿದ್ದರಾಮಯ್ಯ ಸೂಚನೆ
ಇದಕ್ಕೂ ಮುನ್ನ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣದಿಂದ ರಸ್ತೆಯ ಮೂಲಕ ಭರ್ಜರಿ ಶೋ ಮುಗಿಸಿಕೊಂಡು ನಂತರ ತೆರೆದ ವಾಹನದಲ್ಲೇ ವೇದಿಕೆಗೆ ಆಗಮಿಸಿದರು ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಭಾಷಣವನ್ನು ಆರಂಭಿಸಿ ಸಿಗಂದೂರು ಚೌಡೇಶ್ವರಿ ದೇವಿಯನ್ನು ಸ್ಮರಿಸಿದ್ದು ಕಂಡುಬಂತು.