ಹರಿಯಾಣ: ಇಲ್ಲಿನ ರೇವಾರಿ ಜಿಲ್ಲೆಯ ಧರುಹೆರಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಶನಿವಾರ ಸಂಜೆ ಬಾಯ್ಲರ್ ಸ್ಫೋಟದಿಂದಾಗಿ 100 ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.
ಸ್ಫೋಟದಲ್ಲಿ ಡಜನ್ಗಟ್ಟಲೆ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೀಗೆ ಬಾಯ್ಲರ್ ಸ್ಪೋಟದಲ್ಲಿ ಗಾಯಗೊಂಡಿರುವಂತ ಕೆಲವರ ಸ್ಥಿತಿ ಗಂಭೀರವಾಗಿರೋದಾಗಿ ಹೇಳಲಾಗುತ್ತಿದೆ.
ಏತನ್ಮಧ್ಯೆ, ರೋಹ್ಟಕ್ ಪಿಜಿಐಎಂಎಸ್ ನಿರ್ದೇಶಕ ಡಾ.ಎಸ್.ಎಸ್.ಲೋಹ್ಚಾಬ್, ಆಘಾತ ಕೇಂದ್ರದ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೇ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ತಿಳಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಸಂಜೆ 7 ಗಂಟೆ ಸುಮಾರಿಗೆ ಲೈಫ್ ಲಾಂಗ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ನಂತರ ಹಲವಾರು ಅಗ್ನಿಶಾಮಕ ಎಂಜಿನ್ಗಳು ಮತ್ತು ಆಂಬ್ಯುಲೆನ್ಸ್ಗಳನ್ನು ಕಾರ್ಖಾನೆಗೆ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸೋ ಕೆಲಸದಲ್ಲಿ ತೊಡಗಿದ್ದಾವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
‘ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗ’ದ ಅಧ್ಯಕ್ಷರನ್ನಾಗಿ ‘ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್’ ನೇಮಕ
ಲೋಕಸಭಾ ಚುನಾವಣೆ : ಮಣಿಪುರ ಗಲಭೆಯ ಸಂತ್ರಸ್ತರಿಗೆ ನಿರಾಶ್ರಿತ ಕೇಂದ್ರದಿಂದಲೇ ಮತದಾನಕ್ಕೆ ಅವಕಾಶ!