ಗದಗ: ಜಿಲ್ಲೆಯಲ್ಲಿ ನೀರು ಪೂರೈಕೆ ಮಾಡುವಂತ ಪೈಪ್ ಒಂದು ಇದ್ದಕ್ಕಿದ್ದಂತೆ ಒಡೆದು, ನೀರು ಹೊರ ಬಂದ ಪರಿಣಾಮ ಮನೆಯೊಳಗೆ ನುಗ್ಗಿ 10ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿರುವಂತ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಗದಗ-ಬೇಟಗೇರಿಗೆ ನೀರು ಪೂರೈಕೆ ಮಾಡುವಂತ ಪೈಪ್ ಒಡೆದು ಮನೆಗಳಿಗೆ ನೀರು ನುಗ್ಗಿದೆ.
ಏಕಾಏಕಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದಂತ ವಸ್ತುಗಳೆಲ್ಲ ಹಾನಿಗೊಂಡಿರೋದಾಗಿ ತಿಳಿದು ಬಂದಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಕೂಡ ಉಂಟಾಗಿದೆ.
ಈ ಘಟನೆಯ ಬಗ್ಗೆ ಜಿಲ್ಲಾಡಳಿತ, ನಗರಸಭೆಯ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ಹೊರ ಹಾಕಿದ್ದಾರೆ. ಕೂಡಲೇ ಸಂಬಂಧಪಟ್ಟವರು ಪರಿಹಾರ ನೀಡುವಂತೆಯೂ ಸಿಂಗಟಾಲೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ರಾಜ್ಯ ಸರ್ಕಾರ’ದಿಂದ 4 ಬಾರಿ ಗ್ರಾಮ ಪಂಚಾಯ್ತಿ ‘ಸಾಮಾನ್ಯ ಸಭೆ’ಗೆ ಗೈರಾಗಿದ್ದ ‘ಸದಸ್ಯೆ ಅನರ್ಹ’ಗೊಳಿಸಿ ಆದೇಶ