ಬೆಂಗಳೂರು : ಕೃಷಿ ಇಲಾಖೆಯ ಸಮರ್ಥ ಕಾರ್ಯ ನಿರ್ವಹಣೆಯಿಂದ ರಾಜ್ಯದ ರೈತರ ಬರಗಾಲದ ಬವಣೆ ತಗ್ಗಿದೆ.ಮುಂಗಾರು ಹಂಗಾಮಿನಲ್ಲಿ ಗೊತ್ತುಪಡಿಸಲಾಗಿದ್ದ111 ಲಕ್ಷಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಪೈಕಿ 92 ಲಕ್ಷಟನ್ ಉತ್ಪಾದನೆಯಾಗಿದೆ. ಶೇಂಗಾ ಹೊರತುಪಡಿಸಿ ಬಹಳಷ್ಟು ಬೆಳೆಗಳ ಉತ್ಪಾದನೆಯಲ್ಲಿ ದೊಡ್ಡ ಕೊರತೆ ಆಗಿಲ್ಲ, ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದರು.
‘ಕೋವಿಡ್’ ಲಸಿಕೆಯಿಂದ ‘ಹೃದಯಾಘಾತ’ ಸುಳ್ಳು : ಕೇಂದ್ರ ಸ್ಪಷ್ಟನೆ | ‘Heart attack’ from ‘Covid’ vaccine lie
ವಿಧಾನಸೌಧದಲ್ಲಿ ಶನಿವಾರ ಇಲಾಖಾ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಹೊಂಡ, ಚೆಕ್ ಡ್ಯಾಂ, ಬೋರ್ ವೆಲ್ ನೀರಿನ ಆಸರೆ ಜತೆಗೆ, ಸರಕಾರದ ಹಲವು ಕಾರ್ಯಕ್ರಮಗಳ ಲಾಭವನ್ನು ಇಲಾಖೆ ಸಕಾಲಿಕವಾಗಿ ತಲುಪಿಸಿದ ಕಾರಣ ಅನಾವೃಷ್ಟಿಯ ತೀವ್ರತೆ ರೈತರನ್ನು ಹೆಚ್ಚು ಬಾಧಿ ಸಲಿಲ್ಲ ಎಂದರು.
BIGG NEWS : 10 ಸಾವಿರ ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ನೀಡಲು ಮುಂದಾದ ರಾಜ್ಯ ಸರ್ಕಾರ!
10 ಸಾವಿರ ಕೃಷಿಹೊಂಡಗಳ ನಿರ್ಮಾಣ, ಕೃಷಿ ಯಾಂತ್ರೀಕರಣ ಯೋಜನೆಯಡಿ 284 ಕೋಟಿ ರೂ. ಸಬ್ಸಿಡಿ ವಿತರಣೆ, ರೈತಸಿರಿ ಯೋಜನೆ ಜಾರಿ, ರೈತ ಕರೆ ಕೇಂದ್ರ ಸ್ಥಾಪನೆ, ಸಕಾಲಿಕವಾಗಿ ಬೀಜ ಮತ್ತು ಗೊಬ್ಬರ ಪೂರೈಕೆ ಮತ್ತಿತರ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ವಿವರಿಸಿದರು.
ಭಾರತ ಅಧಿಕೃತವಾಗಿ ‘ತೀವ್ರ ಬಡತನ’ ನಿರ್ಮೂಲನೆ ಮಾಡಿದೆ: ಅಮೇರಿಕಾದ ಆರ್ಥಿಕ ಚಿಂತಕರಿಂದ ವರದಿ
ಬೆಳೆ ವಿಮೆ ಯೋಜನೆಯಲ್ಲಿನ ಗೊಂದಲ ಸರಿಪಡಿಸಿ, ಸಮರ್ಪಕ ಜಾರಿ ಮಾಡಿದ ಕಾರಣ 24.51 ಲಕ್ಷ ರೈತರಿಗೆ 600 ಕೋಟಿ ರೂ. ಬೆಳೆ ವಿಮೆ ಪರಿಹಾರ ಪಾವತಿಯಾಗಿದ್ದು, 800 ಕೋಟಿ ರೂ. ಈ ತಿಂಗಳೊಳಗೆ ಪಾವತಿಯಾಗಲಿದೆ. ಮಳೆ ಆಧಾರಿತ ಪ್ರದೇಶ ಅಭಿವೃದ್ಧಿ (ಆರ್‌ಕೆವಿವೈ) ಯೋಜನೆಯಡಿ ಸಮಗ್ರ ಕೃಷಿ ಅಳವಡಿಕೆ ಸಂಬಂಧ ಈಗಾಗಲೇ 4 ಕಂತಿನ ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.