ಶಿವಮೊಗ್ಗ: ನಮ್ಮದು ಮೂರು ಬಾಗಿಲು. ಆದರೆ ಬಿಜೆಪಿಯವರದ್ದು ಮನೆಯೊಂದು 12 ಬಾಗಿಲು ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
‘ಕೋಟಿ ಕಂಠ ಗಾಯನ’ ಎನ್ನುತ್ತಲೇ ಸರ್ಕಾರ ಕನ್ನಡದ ಕತ್ತು ಸೀಳುವುದಾ ..? : H.D ಕುಮಾರಸ್ವಾಮಿ ವಾಗ್ಧಾಳಿ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದರು. ಅವರ ಮನೆ ಅವರು ಮೊದಲು ರಿಪೇರಿ ಮಾಡಿಕೊಳ್ಳಲಿ. ಅವರ ಸರ್ಕಾರವೇ ಕಲುಷಿತವಾಗಿದೆ. ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ಮೂರು ಸೇರಿ ಸರ್ಕಾರ ರಚನೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
‘ಕೋಟಿ ಕಂಠ ಗಾಯನ’ ಎನ್ನುತ್ತಲೇ ಸರ್ಕಾರ ಕನ್ನಡದ ಕತ್ತು ಸೀಳುವುದಾ ..? : H.D ಕುಮಾರಸ್ವಾಮಿ ವಾಗ್ಧಾಳಿ
ದೇಶದಲ್ಲಿ ಎಲ್ಲ ಕಡೆ ಆಪರೇಷನ್ ಕಮಲ ನಡೆಯುತ್ತಿದೆ.ತೆಲಂಗಾಣದಲ್ಲಿ ಆಪರೇಷನ್ ಕಮಲ ಬಹಿರಂಗವಾಗಿದೆ. ಇನ್ನೂ ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.
ಈಶ್ವರಪ್ಪನಿಂದಾಗಿ ಶಿವಮೊಗ್ಗದಲ್ಲಿ ಗಲಾಟೆ ಆಗುತ್ತಿದೆ. ಶಿವಮೊಗ್ಗದ ಗಲಾಟೆಯಿಂದಾಗಿ ಇಲ್ಲಿ ಯಾರು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ ಎಂದರು