ಬೆಳಗಾವಿ: ಮೆಟ್ರೋ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ ಕಾಮಗಾರಿಗೆ ಚುರುಕು ನೀಡುವಂತೆ ವಿಧಾನಪರಿಷತ್ ಸದಸ್ಯ ಕೆ ಗೋವಿಂದರಾಜು ಮನವಿ ಮಾಡಿದ್ದಾರೆ.
BREAKING NEWS: ಹೊಸ ವರ್ಷಾಚರಣೆಗೆ ಖಾಕಿ ಫುಲ್ ಅಲರ್ಟ್; 8,500 ಪೊಲೀಸರ ನಿಯೋಜನೆ; ಪ್ರತಾಪ್ ರೆಡ್ಡಿ
ಈ ಕುರಿತು ವಿಧಾನಪರಿಷತ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದು, ಸಾಕಷ್ಟು ಸವಾಲುಗಳೊಂದಿಗೆ ಕೆಲಸ ಮಾಡಬೇಕಿದೆ. ಇನ್ನೊಂದು ವರ್ಷದಲ್ಲಿ ಏರ್ಪೋರ್ಟ್ಗೆ ಮೆಟ್ರೋ ಸಂಪರ್ಕ ದೊರೆಯಲಿದೆ. ನಿಗದಿತ ಸಮಯದಲ್ಲಿ ಮೆಟ್ರೋ ಕಾಮಗಾರಿ ಮುಗಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.ಮೆಟ್ರೋ ಕಾಮಗಾರಿ ಬೆಂಗಳೂರಿನಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ, ಬೇಗ ಕಾಮಗಾರಿ ಮುಗಿಸುವಂತೆ ಕೆ. ಗೋವಿಂದರಾಜು ವಿಧಾನಪರಿಷತ್ನಲ್ಲಿ ಒತ್ತಾಯಿಸಿದ್ದರು.
ಬೆಂಗಳೂರಿನ ಮಧ್ಯೆ ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ, ಹೈ ಡೆನ್ಸಿಟಿ ಪಾಪ್ಯೂಲೇಶನ್ ಕವರ್ ಮಾಡುವ ಉದ್ದೇಶದಿಂದ ಮಾಡುತ್ತಿದ್ದೇವೆ. ಸಾಕಷ್ಟು ಸವಾಲುಗಳಿಂದ ಕೆಲಸ ಮಾಡಬೇಕಿದೆ.