ಶಿವಮೊಗ್ಗ : ರಾಜ ಕಾಂಗ್ರೆಸ್ ಸರ್ಕಾರದ ಪ್ರಮುಖವಾದ ಐದನೇ ಹಾಗೂ ಕೊನೆಯ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದ್ದು, ಈ ವೇಳೆ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನಮ್ಮ ಸರ್ಕಾರದ ಯೋಜನೆಗಳು ತಲುಪಿವೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ಬಿಜೆಪಿ ನಾಯಕರು ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೆರೆಯ ನೀರು ಕೆರೆಗೆ ಚೆಲ್ಲುವಂತೆ ಶರಣರು ಹೇಳಿದ್ದಾರೆ. ಅದೇ ರೀತಿಯಾಗಿ ಸರ್ಕಾರದ ದುಡ್ಡು ಇದು.ಯಾರದೋ ದುಡ್ಡು ಅಲ್ಲ ಸಾರ್ವಜನಿಕರ ದುಡ್ಡು ಇದು.ರಾಜ್ಯದ ಬೊಕ್ಕಸದಲ್ಲಿ ಇರುವಂತಹ ಬಡವರ ಹಣ . ಈ ಹಣ ಬಡವರಿಗೆ ಸೇರಬೇಕು.
ಕರ್ನಾಟಕ ರಾಜ್ಯದಲ್ಲಿ ಸುಮಾರು 58000 ಕೋಟಿ ನಮ್ಮ ಪಕ್ಷದ ಸಿಂಹ ಪಾಲನ್ನು ಬಡವರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ನಿಸ್ವಾರ್ಥತೆಯಿಂದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಹಣ ತಲುಪಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದು ಅವರು ತಿಳಿಸಿದರು.
ಇನ್ನು ಯುವನಿಧಿ ಕಾರ್ಯಕ್ರಮ ಸಿದ್ಧತೆ ಕುರಿತು ಮಾತನಾಡಿದ ಅವರು, ಈಗಾಗಲೇ ಇಲ್ಲ ಸಿದ್ಧತೆಗಳು ಆಗಿವೆ ಮತ್ತು ಎಲ್ಲಾ ಕಡೆಯಿಂದ ಯುವಕರು ಮತ್ತು ಎಲ್ಲಾ ಜನರು ಹತ್ತುವರೆ ಗಂಟೆಗೆ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನಾನು ಮತ್ತು ಮಧು ಬಂಗಾರಪ್ಪ ಅವರು ಸ್ಥಳ ವೀಕ್ಷಣೆಗೆ ಬಂದಿದ್ದೇವೆ.ಕೊನೆಯ ಕ್ಷಣದಲ್ಲಿ ಎಲ್ಲಾ ಸಿದ್ಧತೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ, ಎಲ್ಲ ಸರಿಯಾಗಿದೆ ಈ ಕಾರ್ಯಕ್ರಮದ ಯಶಸ್ವಿಯಾಗುತ್ತದೆ ಎಂದರು.
ನೆನ್ನೆವರೆಗೆ 66,000 ವಿದ್ಯಾರ್ಥಿಗಳು ರಿಜಿಸ್ಟ್ರೇಷನ್ ಆಗಿದೆ ರಾಜ್ಯದ ಯುವಕರಿಗೆ ನಮ್ಮ ಸರ್ಕಾರ ಖಂಡಿತವಾಗಿ ನಿಮ್ಮ ಜೊತೆ ಇರುತ್ತದೆ. ನಿಮಗೆ ಏನು ಮಾತು ಕೊಟ್ಟಿದ್ದೇವೆಯೊ, ನುಡಿದಂತೆ ನಡೆದಿದ್ದೇವೆ ಮುಂದಿನ ದಿನಗಳಲ್ಲಿ ಕೂಡ ಯುವಕರಿಗೆ ಎಲ್ಲ ರೀತಿಯಿಂದ ಸಹಕಾರ ಕೊಡತಕ್ಕಂತದ್ದು ನಮ್ಮ ಸರ್ಕಾರದ ಉದ್ದೇಶಯಾಗಿದೆ.ಜೊತೆ ಕೌಶಲ್ಯ ತರಬೇತಿ ಕೊಟ್ಟು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಎಲ್ಲಾ ಯುವಕರು ಕೂಡ ಯುವನಿಧಿ ಲಾಭ ಪಡೆಯಬೇಕು ಎಂದರು.
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ, ಸುಮಾರು 12 ಗಂಟೆಗೆ ವೇದಿಕೆಗೆ ಆಗಮಿಸಲಿದ್ದು, ಸುಮಾರು 12 ಸಚಿವರು ಭಾಗವಹಿಸಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರು ಬೆಂಗಳೂರಿನಿಂದ ಹನ್ನೊಂದು ಗಂಟೆಗೆ ಆಗಮಿಸಲಿದ್ದಾರೆ.