ಬೆಂಗಳೂರು: ಇಂದು ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಸ್ ಸಿ. ಎಸ್ ಟಿ ಮೀಸಲಾತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇವತ್ತು ಸರ್ವ ಪಕ್ಷಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ.
BREAKING NEWS: ಬೀದರ್ನ ಮದರಸಾಗೆ ನುಗ್ಗಿ ದುರ್ಗಾ ಪೂಜೆ ಸಲ್ಲಿಸಿದ ಗುಂಪು; 9 ಮಂದಿ ವಿರುದ್ಧ ಪ್ರಕರಣ ದಾಖಲು
ಸಾಮಾಜಿಕವಾಗಿಯೂ ಹಲವು ಸಮಸ್ಯೆ ಬಗೆಹರಿಸಲು ಬದ್ಧವಾಗಿದ್ದೇನೆ. ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ಜನಪರವಾಗಿರುವ ಆಡಳಿತವನ್ನುನಮ್ಮ ಸರ್ಕಾರ ಮಾಡುತ್ತಿದೆ ಚುನಾವಣೆ ದೃಷ್ಟಿಯಿಂದ ಇದು ಮಹತ್ವದ್ದು ಎಂದು ಸಿಎಂ ಹೇಳಿದ್ದಾರೆ.
ಇತ್ತ, ಎಸ್ ಟಿ ವರ್ಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಲಾಗಿದ್ದು, ಈ ನಿಟ್ಟಿನಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಟಿ ರವಿ ಹೇಳಿದ್ದಾರೆ