ಹಾಸನ : ಅಪಘಾತದಲ್ಲಿ ಯುವತಿ ಒಬ್ಬಳ ಮೆದುಳು ಡೆಡ್ ಆಗಿತ್ತು. ಈ ವೇಳೆ ಪೋಷಕರು ಮಗಳ ಸಾವಿನಲ್ಲೂ ಕೂಡ ಸಾರ್ಥಕತೆ ಮೆರೆದಿದ್ದು, ಮಗಳ ಅಂಗಾಂಗವನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಅರಸೀಕೆರೆ ತಾಲ್ಲೂಕಿನ, ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ (18) ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಏಪ್ರಿಲ್ 5 ರಂದು ಸಂಜೆ ಸುಮಾರು 6.30 ರ ಸಮಯದಲ್ಲಿ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ತೀವ್ರ ಪೆಟ್ಟಾಗಿದ್ದರಿಂದ ಯುವತಿ ಸ್ಥಿತಿ ಗಂಭೀರವಾಗಿದ್ದು ನಂತರ ಮೆದುಳು ನಿಷ್ಕ್ರಿಯವಾಗಿತ್ತು. ವೈದ್ಯರು ಮೋನಿಕಾಳ ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ. ಪೋಷಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ನಂತರ ಮಗಳ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದು, 5 ಜೀವಗಳಿಗೆ ಹೊಸ ಬೆಳಕು ನೀಡಿದ್ದಾರೆ.








