ಧಾರವಾಡ:ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ.ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ. ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
BIGG NEWS: ಪರೇಶ್ ಮೇಸ್ತ ಹತ್ಯೆ ಪ್ರಕರಣದ ಮರು ತನಿಖೆ ಆಗಬೇಕು; ಕೆ.ಎಸ್ ಈಶ್ವರಪ್ಪ ಆಗ್ರಹ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರು ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯೋದು ಇದರಿಂದ ಸಂರಕ್ಷಣೆಯಾಗುತ್ತದೆ. ಪ್ರಾರಂಭದಲ್ಲೇ ನಾನು ಮಳೆ , ಗಾಳಿ, ಗುಡುಗು ಇದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು-ನೋವುಗಳಾಗುತ್ತವೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ ಎಂದರು.
BIGG NEWS: ಪರೇಶ್ ಮೇಸ್ತ ಹತ್ಯೆ ಪ್ರಕರಣದ ಮರು ತನಿಖೆ ಆಗಬೇಕು; ಕೆ.ಎಸ್ ಈಶ್ವರಪ್ಪ ಆಗ್ರಹ
ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ. ಮಳೆಯಿಂದ, ರೋಗದಿಂದ ಹಾಗೂ ಭೂಮಿಯಿಂದ ತೊಂದರೆಯಾಗುತ್ತದೆ. ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಈಗಲೂ ಅಂತಹ ಪರಿಸ್ಥಿತಿದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ ಎಂದು ತಿಳಿಸಿದರು.