ಹುಬ್ಬಳ್ಳಿ : ಅಮೆಜಾನ್ ಅಥವಾ ಹಲವು ಆನ್ಲೈನ್ ಶಾಪಿಂಗ್ ಮಾಡುವಾಗ ನಾವು ಮಾಡಿರುವ ಆರ್ಡರ್ ಬೇರೆ ಆದರೆ ಅಲ್ಲಿ ಬರುವ ವಸ್ತುಗಳೆ ಬೇರೆ, ಈ ರೀತಿ ಅನೇಕ ಘಟನೆಗಳು ಈ ಹಿಂದೆ ನಡೆಯಲಿವೆ. ಅದರಂತೆ ಇದೀಗ ಮತ್ತೊಂದು ಘಟನೆ ನಡೆದಿದ್ದು ಹುಬ್ಬಳ್ಳಿ ಉದ್ಯಮಿಯೊಬ್ಬರು ಅಮೆಜಾನ್ ನಲ್ಲಿ ಕ್ಯಾಮೆರಾ ಆರ್ಡರ್ ಮಾಡಿದರೆ ಅವರಿಗೆ ಡೆಲಿವರಿ ಆಗಿದ್ದು ಎರಡು ವಾಷಿಂಗ್ ಪೌಡರ್ ಪ್ಯಾಕೆಟ್.
ಹೌದು ಕ್ಯಾಮರಾ ಆರ್ಡರ್ ಮಾಡಿದ್ದಕ್ಕೆ ವಾಷಿಂಗ್ ಪೌಡರ್ ಡೆಲಿವರಿ ಆಗಿದೆ. ಅಮೆಜಾನ್ ಕಂಪನಿ ವಿರುದ್ಧ ಉದ್ಯಮಿ ಆಲ್ಫ್ರೈಡ್ ಝೆವಿಯರ್ ಗಂಭೀರವಾದ ಆರೋಪ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಅಲ್ಫ್ರೈಡ್ ಝೆವಿಯರ್ ಶಾರ್ಜಾದಲ್ಲಿ ನೆಲೆಸಿದ್ದಾರೆ.
ಡಿಜೆಐ ಹೊಸ ಪಾಕೆಟ್ ಮೂರು ಕ್ಯಾಮರಾ ಬುಕ್ ಮಾಡಿದ್ದರು. ಆತ್ಮೀಯರೊಬ್ಬರಿಗೆ ಹುಡುಗರಿಗೆ ನೀಡಲು ಕ್ಯಾಮೆರಾ ಬುಕ್ ಮಾಡಿದ್ದರು. ಅಮೆಜಾನ್ ನಲ್ಲಿ ಕ್ಯಾಮೆರಾ ಆರ್ಡರ್ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್ ವಿಳಾಸಕ್ಕೆ ನಿನ್ನ ಕೊರಿಯರ್ ಬಂದಿದೆ, ಕೋರಿಯರ್ ತೆರೆದು ನೋಡಿದಾಗ ಎರಡು ಪಾಕೆಟ್ ವಾಷಿಂಗ್ ಪೌಡರ್ ಪತ್ತೆಯಾಗಿದೆ. ಅಮೆಜಾನ್ ಗೆ ದೂರು ನೀಡಿದರು ಸ್ಪಂದಿಸುತ್ತಿಲ್ಲ ಎಂದು ಉದ್ಯಮಿ ಆರೋಪಿಸಿದ್ದಾರೆ.








