ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ನಾಯಿ ( Dog ) ಕಡಿತದಿಂದ ಬರುವಂತ ರೇಬೀಸ್ ಕಾಯಿಲೆಯನ್ನು ( Rabies disease ) ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಸೂಚಿತ ಕಾಯಿಲೆ ( Notified Disease ) ಎಂದು ಘೋಷಣೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಸಿದ್ದಾರೆ. ರೇಬೀಸ್ ಅತ್ಯಂತ ಹಳೆಯ ಗುರುತಿಸಲ್ಪಟ್ಟ ಝೋನಾಟಿಕ್ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಅತ್ಯಂತ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿದೆ ಎಂದಿದ್ದಾರೆ.
ಇನ್ನೂ ಈ ರೋಗವು ರೋಗಿಯಲ್ಲಿ ಅತ್ಯಂತ ನೋವಿನ ಸಾವುಗಳಿಗೆ ಕಾರಣವಾಗುತ್ತದೆ. ಮಾರಣಾಂತಿಕ ರೋಗವನ್ನು ಸಮಯೋಜಿತ ಮತ್ತು ಸೂಕ್ತ ಪಿಇಪಿ ಮೂಲಕ ಸಂಪೂರ್ಣವಾಗಿ ತಡೆಗಟ್ಟಬೇಕಾಗಿರುತ್ತದೆ ಎಂದಿದ್ದಾರೆ.
ರೇಬೀಸ್ ಕಣ್ಗಾವಲು ಬಲಪಡಿಸಲು ಮತ್ತು ಅದಕ್ಕೆ ಅನುಗುಣವಾಗಿ ಮಾನವ ಮತ್ತು ಪಶುವೈದ್ಯಕೀಯ ವಲಯದಲ್ಲಿ ಕೈಗೊಳ್ಳಬೇಕಾದ ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಆದ್ಯತೆ ನೀಡುವ ಸಲುವಾಗಿ ಮತ್ತು 2023 ಅವಧಿಗೆ ಈ ರೋಗವನ್ನು ತಡೆಗಟ್ಟುವ, ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮತ್ತು ಜಾಗರೂಕತೆಯನ್ನು ಉತ್ತೇಜಿಸಲು ರೇಬೀಸ್ ರೋಗವನ್ನು ಅಧಿಸೂಚಿತ ಕಾಯಿಲೆ ಎಂಬುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಕಾಯ್ದೆಗಳಡಿ ಜೀವನಾಂಶ ಪಡೆಯಲು ಪತ್ನಿಗೆ ಅವಕಾಶ : ಹೈಕೋರ್ಟ್ ಮಹತ್ವದ ಆದೇಶ