ನವದೆಹಲಿ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದು ವಿಪಕ್ಷಗಳ ನಾಯಕರನ್ನು ಹೆದರಿಸಿ ಬಿಜೆಪಿಗೆ ಸಳೆಯಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಕೋವಿಡ್ ಲಸಿಕೆಗಳು ಹೃದಯ, ಮೆದುಳು, ರಕ್ತದ ಆನಾರೋಗ್ಯವನ್ನು ಹೆಚ್ಚಳಸಿವೆ: ಅಧ್ಯಯನ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ವಿಪಕ್ಷಗಳ ನಾಯಕರನ್ನು ಹೆದರಿಸಿ ಬಿಜೆಪಿಗೆ ಸೆಳೆಯಲಾಗುತ್ತಿದೆ. ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಪ್ರಧಾನಿ ಮೋದಿಗೆ ಒಂದು ಪ್ರಶ್ನೆ ಕೇಳುತ್ತೇನೆ.ನಮ್ಮ ಪಕ್ಷದಲ್ಲಿದ್ದಾಗ ಅವರೆಲ್ಲ ಭ್ರಷ್ಟಾಚಾರಿಗಳು ಆಗಿರುತ್ತಾರೆ.ನಿಮ್ಮ ಪಕ್ಷ ಬಂದ ಕೂಡಲೇ ಅವರೆಲ್ಲ ಹೇಗೆ ಸ್ವಚ್ಛ ಆಗುತ್ತಾರೆ? ಎಂದು ಪ್ರಶ್ನಿಸಿದರು.
ಬಿಜೆಪಿ ಜನರ ಹೆಣದ ರಾಶಿಯ ಮೇಲೆ ರಾಜಕೀಯ ಮಾಡುತ್ತೆ : ಸಚಿವ ಈಶ್ವರ ಖಂಡ್ರೆ ಆಕ್ರೋಶ
ಈ ಹಿಂದೆ ಅವರನ್ನು ಬೈದೇ ನೀವು ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೀರಿ. ಸದ್ಯ ದೇಶದಲ್ಲಿ ಜಾಹೀರಾತು ಸರ್ಕಾರ ನಡೆಯುತ್ತಿದೆ.ಬೆಳಿಗ್ಗೆ ಎದ್ದರೆ ಟಿವಿ ಪತ್ರಿಕೆಗಳಲ್ಲಿ ಅವರದ್ದೇ ಜಾಹಿರಾತು ಇರುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.