ಹಾಸನ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಗರಣ, ಮುಡಾದಲ್ಲಿ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಈ ಎಲ್ಲಾ ಹಗರಣಗಳಿಂದಲೇ ರಾಜ್ಯ ಸರ್ಕಾರ ಪತನವಾಗುತ್ತೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಬರೀ ಹಗರಣಗಳೇ ಬೆಳಕಿಗೆ ಬರುತ್ತಿವೆ. ಎಲ್ಲಾ ಹಗರಣ ದಲಿತರಿಗೆ ಸೇರಬೇಕಿದ್ದ ಹಣದ್ದೇ ಆಗಿದೆ. ವಾಲ್ಮೀಕಿ ಎಸ್ ಟಿ ಪಿ, ಟಿ ಎಸ್ ಪಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ.ಮುಡಾ ಹಗರಣದಂತಹ ಹಗರಣಗಳೆ ಎಲ್ಲಾ ಹಗರಣಗಳು ದಲಿತರಿಗೆ ಮಾಡಿರುವ ಮೋಸಗಳೆ ಆಗಿವೆ ಎಂದರು.
ಹಗರಣಗಳು ಹೊರಬಂದ ಮೇಲೆ ಸಿಎಂ ಸಿದ್ದರಾಮಯ್ಯ ಮಂಕಾಗಿದ್ದಾರೆ.ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಶಾಪ ತಟ್ಟಿದೆ. ಈ ಸರ್ಕಾರ ದಲಿತ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಸರ್ಕಾರ ಕೋಮಾ ಸ್ಟೇಜ್ ನಲ್ಲಿದೆ. ಸರ್ಕಾರ ಕೆಲಸಾನು ಮಾಡುತ್ತಿಲ್ಲ ಸುಮ್ಮನೇನು ಇರುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ ಹಾಸನದಲ್ಲಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಸುಳ್ಳು ಜಾಹಿರಾತು ಕೊಟ್ಟಿದ್ದಕ್ಕೆ ನಾವು ಕೇಸ್ ಹಾಕಿದ್ದೆವು. ರಾಹುಲ್ ಗಾಂಧಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಬೇಲ್ ನಲ್ಲಿದ್ದಾರೆ. ಸರ್ಕಾರ ಇನ್ನೆಷ್ಟು ದಿನ ಇರುತ್ತೆ? ಈ ಹಗರಣಗಳೆಲ್ಲ ನೋಡಿದರೆ ಸರ್ಕಾರ ಇರುವುದಿಲ್ಲ ಎಂದು ಅವರ ಪಕ್ಷದ ಶಾಸಕರೇ ಈ ರೀತಿ ಹೇಳುತ್ತಿದ್ದಾರೆ.ಮಂತ್ರಿಗಳು ಸರ್ಕಾರ ಬೀಳಿಸಲು ಬಂದಿದ್ದಾರೆ ಅಂತಾರೆ. ಮುಂದೆ ಆಗುವುದಕ್ಕೆ ಮೊದಲೇ ಕೆವಿಯಟ್ ಹಾಕಿದ್ದಾರೆ ಎಲ್ಲಾ ಹಗರಣಗಳಿಂದ ಈ ಸರ್ಕಾರ ಹೋಗುತ್ತದೆ ಎಂದು ತಿಳಿಸಿದರು.