ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಮಾಡಿ ಈ ಕೆಳಗಿನಂತೆ ಸವಾಲ್ ಹಾಕಿದ್ದಾರೆ. ಆರ್ ಅಶೋಕ್ ಅವರ ಸವಾಲಿಗೆ ಸಿಎಂ ಜವಾಬ್ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಜಾರಿ ನಿರ್ದೇಶನಾಲಯ (ಇ.ಡಿ.) ಬಂಧನದಿಂದ ತಪ್ಪಿಸಿಕೊಳ್ಳಲು ಮುಡಾದಿಂದ ಅಕ್ರಮವಾಗಿ ಪಡೆದ 14 ಸೈಟುಗಳನ್ನು ವಾಪಸ್ಸು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಕುಟುಂಬ, ಈಗ ಸೈಟುಗಳನ್ನು ವಾಪಸ್ಸು ಪಡೆಯುವ ಮಾತಾಡುತ್ತಿದೆ ಎಂದಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳೇ, ನಿಮಗೆ ನನ್ನದೊಂದು ಸವಾಲು. ನಿಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಅವರು ಮೂಡಾದಿಂದ 14 ಸೈಟುಗಳನ್ನು ವಾಪಸ್ಸು ಪಡೆಯುತ್ತೇವೆ, ಅದು ನಮಗೇ ಸೇರಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀವು 16 ಬಜೆಟ್ ಅಲ್ಲ, 19 ಬಜೆಟ್ ಮಂಡಿಸುತ್ತೀರಿ ಎಂದೂ ಕೂಡ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನಿಜವಾಗಿಯೂ ಸತ್ಯವಂತರಾಗಿದ್ದಾರೆ, ಪ್ರಾಮಾಣಿಕರಾಗಿದ್ದರೆ, ಸ್ಟ್ರಾಂಗ್ ಮುಖ್ಯಮಂತ್ರಿ ಆಗಿದ್ದರೆ, ಮುಂದಿನ ಬಜೆಟ್ ಮಂಡಿಸುವ ಮುನ್ನ ಮುಡಾಗೆ ಹಿಂದಿರುಗಿಸಿರುವ ಸೈಟುಗಳನ್ನು ವಾಪಸ್ಸು ಪಡೆಯಲಿ. ಇದು ನನ್ನ ಸವಾಲು. ಇದಕ್ಕೆ ಸಿದ್ದರಾಮಯ್ಯನವರು ಒಪ್ಪುತ್ತರಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ @siddaramaiah ಅವರಿಗೆ ನನ್ನದೊಂದು ಸವಾಲು
ಜಾರಿ ನಿರ್ದೇಶನಾಲಯ (ಇ.ಡಿ.) ಬಂಧನದಿಂದ ತಪ್ಪಿಸಿಕೊಳ್ಳಲು ಮುಡಾದಿಂದ ಅಕ್ರಮವಾಗಿ ಪಡೆದ 14 ಸೈಟುಗಳನ್ನು ವಾಪಸ್ಸು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಕುಟುಂಬ, ಈಗ ಸೈಟುಗಳನ್ನು ವಾಪಸ್ಸು ಪಡೆಯುವ ಮಾತಾಡುತ್ತಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳೇ, ನಿಮಗೆ ನನ್ನದೊಂದು ಸವಾಲು. ನಿಮ್ಮ ಪುತ್ರ,… pic.twitter.com/pzDcL4n998
— R. Ashoka (@RAshokaBJP) March 9, 2025
SHOCKING: ಪಾರ್ಟಿಗೆ ಹೋಗಿದ್ದವರು ಶಾಕ್: ಗೋಬಿ ಮಂಚೂರಿಯಲ್ಲಿ ಇಲಿ ಮರಿ ಪತ್ತೆ.!
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!