ಹುಬ್ಬಳ್ಳಿ : ಬಿಜೆಪಿ ಯಾವಾಗಲೂ ಸಂವಿಧಾನವನ್ನು ವಿರೋಧಿಸುತ್ತಾ ಬಂದಿದೆ ಹಾಗಾಗಿ ಸಂವಿಧಾನ ವಿರೋಧಿಸುವ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಒಂದು ಫಿಫಿಲಾಸಫಿಯಾಗಿದೆ. ಎಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೀಳು ಮಟ್ಟದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲಸ ಜನರನ್ನು ಜೋಡಣೆ ಮಾಡುವುದಾಗಿದೆ. ಬಿಜೆಪಿಯವರದ್ದು ಜನರನ್ನು ವಿಭಜನೆ ಮಾಡುವ ಕೆಲಸವಾಗಿದೆ. ಬಿಜೆಪಿ ಯಾವಾಗಲೂ ಮೀಸಲಾತಿ ವಿರೋಧಿಯಾಗಿದೆ ಎಂದು ಕಿಡಿ ಕಾರಿದರು.
ಸಂವಿಧಾನ ವಿರೋಧಿಸುವುದು ಬಿಜೆಪಿ ಆರ್ ಎಸ್ ಎಸ್ ಆಂತರಿಕ ಫಿಲಾಸಫಿಯಾಗಿದೆ. ಬಿಜೆಪಿಯವರಿಗೆ ಸಂವಿಧಾನ ಮೀಸಲಾತಿ ಮೇಲೆ ನಂಬಿಕೆ ಇಲ್ಲ. ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ನೀಡಿದೆ ಎಂದರು.
ಆದರೆ ನಾವು ಶೈಕ್ಷಣಿಕ ಆರ್ಥಿಕವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದೇವೆ. ನಾವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಚ್ಚರಿಯ ಫಲಿತಾಂಶ ಬರಲಿದೆ.ನಾವು ನಿರೀಕ್ಷೆಗೂ ಮೀರಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.