ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಪರೋಕ್ಷವಾಗಿ ವಾಕ್ಸಮರ ನಡೆಯುತ್ತಿದೆ. ಇದರ ಮಧ್ಯ ದೀಪದ ಬೆಳಕು ಮಾತ್ರ ಗೊತ್ತಾಗುತ್ತದೆ ಆದರೆ ದೀಪದ ಕಷ್ಟ ಗೊತ್ತಾಗುವುದಿಲ್ಲ ಎಂದು ಬೆಂಗಳೂರಿನ ಜಿಕೆವಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಬಿದರಿನ ಬೊಮ್ಮನಿಂದ ಕೊಳಲು ಮಾಡುತ್ತಾರೆ. ಕೊಳಲು ಇಡೀ ವಿಶ್ವಕ್ಕೆ ಪರಿಚಯ. ಕುರಿಯ ಚರ್ಮ ಹಾಗು ಕೋಣದ ಚರ್ಮದಿಂದ ತಮಟೆ ಮಾಡುತ್ತೇವೆ. ಸಗಣಿ ಬಿಸಾಕುತ್ತೇವೆ ಅದಕ್ಕೆ ಹುಲ್ಲು ಸೇರಿಸಿದರೆ ಪಿಳ್ಳಾರತಿ ಆಗುತ್ತದೆ. ದೀಪದ ಬೆಳಕು ಮಾತ್ರ ಗೊತ್ತಾಗುತ್ತದೆ ಆದರೆ ದೀಪದ ಕಷ್ಟ ಗೊತ್ತಾಗಲ್ಲ ಬೆವರು ಶ್ರಮಕ್ಕೆ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದರು.








