ಕೋಲಾರ : ಈ ದೇಶವನ್ನು ಆಳುವ ಸಾಮರ್ಥ್ಯ ಇರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾತ್ರ. ಅವರನ್ನು ಬಿಟ್ಟರೆ ಈ ದೇಶವನ್ನು ಆಳುವ ಸಾಮರ್ಥ್ಯ ಯಾರಿಗಾದರೂ ಇದ್ದರೆ ಹೇಳಿ ಎಂದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದರು.
ದೇಶದಲ್ಲಿ ಎರಡು ರಾಜಕೀಯ ಬಣಗಳಿವೆ. ಒಂದು ಎನ್ಡಿಎ ಒಕ್ಕೂಟ ಇನ್ನೊಂದು ಇಂಡಿಯಾ ಒಕ್ಕೂಟ ಇದೆ.ಎರಡು ಬಣಗಳ ಮುಖ್ಯಸ್ಥರು ಯಾರು? ಒಂದು ಬಣಕ್ಕೆ ಯಾರು ಇಲ್ಲ. ಇನ್ನೊಂದು ಬಣಕ್ಕೆ ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ ಮೋದಿ ಮುಖ್ಯಸ್ಥರಿದ್ದಾರೆ. ಇಂಡಿಯಾ ಒಕ್ಕೂಟದ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವ್ಯಂಗ್ಯವಾಡಿದರು.
ಲೋಕಸಭಾ ಕ್ಷೇತ್ರವನ್ನು ಮುನಿಸ್ವಾಮಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಾರೆ 91ನೇ ವಯಸ್ಸಿನಲ್ಲಿ ಯಾವುದೇ ಆಕಾಂಕ್ಷೆ ಇಲ್ಲದೆ ಒಕ್ಕೂಟ ಸೇರಿದ್ದೇನೆ.ಈ ದೇಶ ಆಳುವ ಸಾಮರ್ಥ್ಯ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರುವುದು. ಮೋದಿ ಬಿಟ್ಟು ಯಾರಿಗಾದರೂ ಆಳುವ ಶಕ್ತಿ ಇದ್ದರೆ ಹೇಳಲಿ. ರಾಜ್ಯದ 28 ಕ್ಷೇತ್ರಗಳಲ್ಲೂ ನಾವು ಎನ್.ಡಿ.ಎ ಒಕ್ಕೂಟ ಗೆಲ್ಲುತ್ತದೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಎಚ್ ಡಿ ದೇವೇಗೌಡ ಹೇಳಿಕೆ ನೀಡಿದರು.