ಮಂಗಳೂರು : ಇತ್ತೀಚಿಗೆ ಈ ಆನ್ಲೈನ್ ಟ್ರೇಡಿಂಗ್ ಆಪ್ ಗಳ ಹಾವಳಿ ಹೆಚ್ಚಾಗಿದ್ದು, ಅನೇಕರು ಇಂತಹ ಆನ್ಲೈನ್ ಆಪ್ ಗಳನ್ನು ನಂಬಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇದೀಗ ಮಂಗಳೂರಿನಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾದ ಮಹಿಳೆಯ ಮಾತನ್ನು ಕೇಳಿ ಆನ್ಲೈನ್ ಟ್ರೇಡಿಂಗ್ ನಲ್ಲಿ ಸುಮಾರು 1 ಕೋಟಿಗೂ ಅಧಿಕ ಹೆಚ್ಚು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಹೌದು ವ್ಯಕ್ತಿಯೊಬ್ಬರು ಡೇಟಿಂಗ್ ಆಪ್ ಮೂಲಕ ಲೀನಾ ಜೋಸ್ ಎಂಬ ಹೆಸರಿನ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ಬಳಿಕ ಆಕೆಯ ಬಳಿ ಆನ್ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ಪಡೆದುಕೊಂಡು ಹಂತಹಂತವಾಗಿ ಅವರು ಹೇಳಿರುವ ಆನ್ಲೈನ್ ಟ್ರೇಡಿಂಗ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ.
ಯುವತಿಯ ಮಾತಿನಂತೆ admiral market forex trading ನಲ್ಲಿ ವ್ಯಕ್ತಿ ಮೊದಲಿಗೆ 50 ಸಾವಿರ ಹಣ ಹೂಡಿಕೆ ಮಾಡಿದ್ದಾರೆ. ಬಳಿಕ 80 ಸಾವಿರ ಲಾಭ ಬಂಧಿರುವುದನ್ನು ತೋರಿಸುತ್ತಿತ್ತು. ಅದಾದ ಬಳಿಕ ಹಣ ವಿತ್ ಡ್ರಾ ಮಾಡಲು ಕಸ್ಟಮರ್ ಕೇರ್ ಬಳಿ ಕೇಳಿದಾಗ ಅವ್ರು ಹೇಳಿದಂತೆ ಹಂತ ಹಂತವಾಗಿ ಹಣ ಹಾಕಿದ್ದಾರೆ. ಅವರು ಹೇಳಿದಂತೆ ಒಟ್ಟು ಒಂದು ಕೋಟಿಗೂ ಅಧಿಕ ಹಣವನ್ನು ಅವರು ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದ್ದಾರೆ.
ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದಾಗ ಅನುಮಾನ ಬಂದು ನನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಗೊತ್ತಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ಆನ್ಲೈನ್ ಟ್ರೇಡಿಂಗ್ ಎಂಬ ನಕಲಿ ಕಂಪನಿಯ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ವಂಚನೆಗೊಳಗಾದ ವ್ಯಕ್ತಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.