ಮುಂಬೈ : ಮಹಿಳೆಯೊಬ್ಬರು ಆನ್ಲೈನ್ನಲ್ಲಿ ವಿಸ್ಕಿ ಖರೀದಿ ನೆಪದಲ್ಲಿ ಬರೋಬ್ಬರಿ 5.35 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಹೌದು, ರಾತ್ರಿ ವೇಳೆ ವಿಸ್ಕಿಯನ್ನು ಹೋಮ್ ಡೆಲಿವರಿ ಮಾಡುವುದಾಗಿ ಭರವಸೆ ನೀಡಿ ಕನ್ ಮ್ಯಾನ್ʼಗಳು ಮಹಿಳೆಯ ಖಾತೆಯಿಂದ 5.35 ಲಕ್ಷ ರೂ.ಗಳನ್ನ ಲಪಾಟಾಯಿಸಿದ್ದಾರೆ. ಅಂದ್ಹಾಗೆ, ವಿಸ್ಕಿಯ ಹೋಮ್ ಡೆಲಿವರಿ ಸೌಲಭ್ಯವನ್ನ ಒದಗಿಸುವ ಸಂಸ್ಥೆಯ ಸಂಖ್ಯೆಯನ್ನ ಮಹಿಳೆ ಆನ್ಲೈನ್ʼನಲ್ಲಿ ಸಂಪಾದಿಸಿದ್ದಾಳೆ. ದರೋಡೆಕೋರರು ಮದ್ಯದಂಗಡಿ ಮಾಲೀಕರು ಮತ್ತು ಮಾರಾಟಗಾರರಂತೆ ನಟಿಸಿ ಮಹಿಳೆಯನ್ನ ಮೋಸಗೊಳಿಸಿದ್ದಾರೆ.
ವರದಿಯ ಪ್ರಕಾರ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ರಾತ್ರಿ 9 ಗಂಟೆಗೆ, ಕೇಕ್ ಅಲಂಕರಿಸಲು ಮತ್ತು ವಿನ್ಯಾಸಗೊಳಿಸಲು ವಿಸ್ಕಿ ಬಾಟಲಿಯ ಅಗತ್ಯವಿತ್ತು. ಆ ಸಮಯದಲ್ಲಿ ಮದ್ಯದಂಗಡಿಗಳನ್ನ ಮುಚ್ಚಿದ್ದರಿಂದ, ಮಹಿಳೆ ಆನ್ಲೈನ್ ಮದ್ಯ ವಿತರಣೆಗಾಗಿ ಅಂತರ್ಜಾಲದಲ್ಲಿ ಹುಡುಕಿದ್ದು, ವಂಚಕರ ಸಂಖ್ಯೆಗೆ ಕರೆ ಮಾಡಿದ್ಧಾಲೆ.
ಇಂಟರ್ನೆಟ್ʼನಿಂದ ಸಂಖ್ಯೆ ಲಭ್ಯ
ಮಹಿಳೆ ಅಂತರ್ಜಾಲದಲ್ಲಿ ವಂಚಕರ ಸಂಖ್ಯೆ ಪಡೆದು ಅವ್ರಿಗೆ ಕರೆ ಮಾಡಿದ್ದು, ವಂಚಕ ತನ್ನನ್ನ ತಾನು ಮದ್ಯದಂಗಡಿಯ ಮಾಲೀಕ ಎಂದು ಗುರುತಿಸಿಕೊಂಡಿದ್ದಾನೆ. ಅಂಗಡಿಯನ್ನ ಮುಚ್ಚಲಾಗಿದೆ. ಆದ್ರೆ, ನಾವು ಮನೆಗೆ ಮದ್ಯವನ್ನ ತಲುಪಿಸುತ್ತೇವೆ ಎಂದು ನಂಬಿಸಿದ್ದಾನೆ. ಅದ್ರಂತೆ, ಕ್ಯೂಆರ್ ಕೋಡ್ ಮೂಲಕ 550 ರೂ.ಗಳನ್ನ ಪಾವತಿಸುವಂತೆ ಕೇಳಿದ್ದಾನೆ. ನಂತ್ರ ತನ್ನ ಸೇಲ್ಸ್ ಎಕ್ಸಿಕ್ಯುಟೀವ್ ಕಳುಸಿ ಮದ್ಯ ಕಳಿಸುವುದಾಗಿ ಹೇಳಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಬಲೆಗೆ ಬಿದ್ದ ಮಹಿಳೆ
ಹಣ ಪಾವತಿಸಿದ ಸ್ವಲ್ಪ ಸಮಯದ ನಂತ್ರ ಒಬ್ಬ ವ್ಯಕ್ತಿಯಿಂದ ನನಗೆ ಕರೆ ಬಂತು, ಆತ ತನ್ನನ್ನು ಸೇಲ್ಸ್ ಎಕ್ಸಿಕ್ಯುಟೀವ್ ಎಂದು ಪರಿಚಯಿಸಿಕೊಂಡ. ಮನೆಯಲ್ಲಿ ಮದ್ಯವನ್ನು ತಲುಪಿಸಲು ತಾನು ನೋಂದಾಯಿಸಿಕೊಳ್ಳಬೇಕು ಎಂದು ಆ ವ್ಯಕ್ತಿ ಮಹಿಳೆಗೆ ಹೇಳಿದ್ದು, ಇದನ್ನ ಮಾಡಲು ಒಬ್ಬ ಕಾರ್ಯನಿರ್ವಾಹಕನು ತಮಗೆ ಸಹಾಯ ಮಾಡುತ್ತಾನೆ ಎಂದಿದ್ದಾನೆ. ಅದ್ರಂತೆ, ನಂತ್ರ ಇನ್ನೊಬ್ಬ ವ್ಯಕ್ತಿ ತನಗೆ ಕರೆ ಮಾಡಿ ಮೊಬೈಲ್ ಪಾವತಿ ಸೇವೆ ಗೂಗಲ್ ಪೇಗೆ ಹೋಗುವಂತೆ ಕೇಳಿಕೊಂಡಿದ್ದು, ಪಾವತಿಯ ಸ್ಥಳದಲ್ಲಿ ರಸೀದಿ ಸಂಖ್ಯೆ 19,051 ನಮೂದಿಸಲು ಕೇಳಿದ್ದಾನೆ. ಇದನ್ನ ಮಾಡಿದ ನಂತ್ರ, ಮಹಿಳೆಯ ಖಾತೆಯಿಂದ 19,051 ರೂ.ಗಳನ್ನ ವರ್ಗಾಯಿಸಲಾಗಿದೆ ಎಂಬ ಸಂದೇಶವನ್ನ ತಕ್ಷಣವೇ ಆಕೆ ಸ್ವೀಕರಿಸಿದ್ದಾಳೆ.
ಸಿಸ್ಟಂ ದೋಷವನ್ನ ಹೇಳಿ ತದನಂತರ ಹಣ ಹಿಂಪಡೆಯಿರಿ.!
ಮಹಿಳೆ ತಕ್ಷಣವೇ ಈ ಬಗ್ಗೆ ಪುರುಷನಿಗೆ ಹೇಳಿದ್ದು, ವ್ಯವಸ್ಥೆಯಲ್ಲಿನ ದೋಷದಿಂದಾಗಿ ಹೀಗೆ ಸಂಭವಿಸಿದೆ ಎಂದಿದ್ದಾನೆ. ಹಣವನ್ನ ಹಿಂದಿರುಗಿಸುವ ನೆಪದಲ್ಲಿ, ಆತ ಮತ್ತೆ ಇಡೀ ಪ್ರಕ್ರಿಯೆಯನ್ನ ಮಾಡುವಂತೆ ಮಹಿಳೆಯನ್ನ ಕೇಳಿದ್ದಾನೆ. ಅದ್ರಂತೆ, ಮಹಿಳೆಯ ಖಾತೆಯಿಂದ ಮತ್ತೆ 19,051 ರೂ.ಗಳನ್ನ ಕಡಿತಗೊಳಿಸಲಾಯಿತು. ಈ ಬಗ್ಗೆ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ, ಹಣವನ್ನ ಕ್ರೆಡಿಟ್ ಮಾಡುವ ಬದಲು ಡೆಬಿಟ್ ಮಾಡಲಾಗುತ್ತಿದೆ ಎಂದು ದರೋಡೆಕೋರ ಮಹಿಳೆಗೆ ಹೇಳಿದ್ದಾನೆ. ಅವ್ರ ಮಾತನ್ನ ನಂಬಿದ ಮಹಿಳೆ ಆಕೆಯ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳನ್ನ ನೀಡಿದ್ದಾಳೆ. ಈ ರೀತಿ ಮಾಡಿದ ನಂತ್ರ ಮಹಿಳೆಯ ಖಾತೆಯಿಂದ 95,051, 1,71,754, 48,000 ಮತ್ತು 96,045 ರೂ. ಈ ರೀತಿಯಾಗಿ, ವಂಚಕ ಮಹಿಳೆಗೆ 5.35 ಲಕ್ಷ ರೂ.ಗಳನ್ನ ವಂಚಿಸಿದ್ದಾನೆ.