ಶಿವಮೊಗ್ಗ : 2024-25ನೇ ಶೈಕ್ಷಣಿಕ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ಪಾಜಪೇಯಿ/ ಕಿತ್ತೂರು ರಾಣಿ ಚೆನ್ನಮ್ಮ / ಡಾ|| ಬಿ.ಆರ್. ಅಂಬೇಡ್ಕರ್/ ಶ್ರೀಮತಿ ಇಂದಿರಾ ಗಾಂಧಿ/ ನಾರಾಯಣ ಗುರು ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಕೆಲವು ವಿಶೇಷ ವರ್ಗದಡಿ ಪ್ರವೇಶಾವಕಾಶವನ್ನು ಕಲ್ಪಿಸಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಸಫಾಯಿ ಕರ್ಮಚಾರಿ/ ಗುರುತಿಸಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್/ ಚಿಂದಿ ಆಯುವವರು / ಸ್ಮಶಾನ ಕಾರ್ಮಿಕರ ಮಕ್ಕಳು. ಬಾಲ ಕಾರ್ಮಿಕರು/ ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು. 25% ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿ.ಗೆ ತುತ್ತಾದ ಪೋಷಕರ ಮಕ್ಕಳು/ ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಮಕ್ಕಳು/ ಅನಾಥ ಮಕ್ಕಳು. ಗುರುತಿಸಿರುವ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ- ಅತೀ ಸೂಕ್ಷ್ಮ ಸಮುದಾಯದ/ಸೈನಿಕರ ಮತ್ತು ಮಾಜಿ ಸೈನಿಕರ/ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು. ಪ.ಜಾ./ಪ.ಪಂ.ಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು ಈ ಎಲ್ಲಾ ವಿಶೇಷ ವರ್ಗಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೆಬ್ಸೈಟ್ https://cetonline.karnataka.gov.in/kreis24d/ ಲಿಂಕ್ನಲ್ಲಿ ದಿ:14/07/2024ರೊಳಗಾಗಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ 9482300400 ನ್ನು ಸಂಪರ್ಕಿಸುವುದು.
BREAKING: ಆಂಧ್ರದ ಮಾಜಿ ಸಿಎಂ ‘ಜಗನ್ ಮೋಹನ್ ರೆಡ್ಡಿ’ ವಿರುದ್ಧ ‘ಕೊಲೆ ಯತ್ನ’ ಪ್ರಕರಣ ದಾಖಲು | Jagan Mohan Reddy