ಬೆಂಗಳೂರು : ಬೆಂಗಳೂರು ನಗರದಲ್ಲಿ ಈ ಹಿಂದೆ ಸಾಕಷ್ಟು ರೋಡ್ ರೇಜ್ ಪ್ರಕರಣಗಳು ನಡೆದಿದ್ದು, ಎಷ್ಟೇ ನಿಯಂತ್ರಣ ಕ್ರಮ ಕೈಗೊಂಡರು ಸಹ ಈ ರೋಡ್ ರೇಜ್ ಪ್ರಕರಣಗಳು ನಿಲ್ಲುತ್ತಿಲ್ಲ. ಇದೀಗ ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಬುಲೆಟ್ ಬೈಕ್ ನಲ್ಲಿ ಬಂದ ಬೈಕ್ ಸವಾರ ದೌಲತ್ತು ಮೆರೆದಿದ್ದಾನೆ.
ಬುಲೆಟ್ ಬೈಕ್ ನಲ್ಲಿ ಬಂದಂತಹ ಬೈಕ್ ಸವಾರ ಸಡನ್ ಆಗಿ ಅಡ್ಡ ಬಂದ ಅಂತ ಪ್ರಶ್ನಿಸಿದಕ್ಕೆ ಅಶ್ಲೀಲವಾಗಿ ಬೈದಿದ್ದಾನೆ. ಬೆಂಗಳೂರಿನ ಕುರುಬ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಸಡನ್ ಆಗಿ ಅಡ್ಡ ಬಂದಿದ್ದಕ್ಕೆ ಶರತ್ ಎನ್ನುವವರು ಪ್ರಶ್ನಿಸಿದ್ದಾರೆ. ಈ ವೇಳೆ ಬುಲೆಟ್ ನಲ್ಲಿ ಬಂದಂತಹ ವ್ಯಕ್ತಿ ಶರತ್ ಅವರಿಗೆ ಅಶ್ಲೀಲವಾಗಿ ನಿಂದನೆ ಮಾಡಿ ಬೈದಿದ್ದಾನೆ.