ಬೆಂಗಳೂರು: ನಗರದಲ್ಲಿ ದುರಸ್ತಿ ವೇಳೆ ಕಟ್ಟಡದಿಂದ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದರೇ, ಮತ್ತೆ ಮೂವರು ಗಾಯಗೊಂಡಿರುವಂತ ಘಟನೆ ಮಹದೇವಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿ ಮಹದೇವಪುರ ಮುಖ್ಯ ರಸ್ತೆಯಲ್ಲಿ ದುರಸ್ತಿ ವೇಳೆಯಲ್ಲಿ ಕಟ್ಟಡದ ಮೇಲಿನಿಂದ ಬಿದ್ದು ಹಾವೇರಿ ಮೂಲದ ಕಾರ್ಮಿಕ ಯೂಸೂಫ್(35) ಎಂಬುವರು ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಕೆ.ಪರಶುರಾಮ್ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದಂತ ಅವರು, ಸಂಜೆ ಟಿನ್ ಫ್ಯಾಕ್ಟರಿ ಬಳಿಯಲ್ಲಿ ಅಬ್ದುಲ್ ವಾಜಿದ್ ಎಂಬುವರಿಗೆ ಸೇರಿದಂತ ಹಳೆಯ ಕಟ್ಟಡದ ರಿನೋವೇಷನ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.
ರಿನೋವೇಶನ್ ಸಂದರ್ಭದಲ್ಲಿ ಕಟ್ಟಡಕ್ಕೆ ಹಾಕಿದ್ದಂತ ಸಾರುವೆ ಮರ ಮುರಿದು ಬಿದ್ದು ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಯೂಸೂಫ್ ಶರೀಫ್ ಎಂಬುವರು ಸಾವನ್ನಪ್ಪಿದ್ದಾರೆ. ತನುಜಾ, ಆಕಾಶ್ ಸೇರಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
KSHCOEA BMS ಸಂಘದ ಹೋರಾಟದ ಫಲ: ಮೃತ ‘NHM ಸಿಬ್ಬಂದಿ’ ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ‘ಜಾತಿಗಣತಿ ಸಮೀಕ್ಷೆ’ ಅವಧಿ ಮುಂದುವರೆಯಿಲ್ಲ: ಸಚಿವ ಶಿವರಾಜ್ ತಂಗಡಗಿ








